ಗೋಕರ್ಣ: ಇತ್ತಿಚಿನ ದಿನಗಳಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರು ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸಮುದ್ರಕ್ಕೆ ಇಳಿದು ಜೀವಕ್ಕೆ ಅಪಾಯ ತಂದಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಹೌದು, ನೀರಲ್ಲಿ ಈಜಲು ತೆರಳಿದ್ದ ವೇಳೆ ಮುಳುಗಿ ಅಸ್ವಸ್ಥರಾಗಿದ್ದ ತಾಯಿ-ಮಗುವನ್ನು ರಕ್ಷಣೆ ಮಾಡಿರುವ ಘಟನೆ ಇಲ್ಲಿನ ತದಡಿ ಸಮುದ್ರದಲ್ಲಿ ನಡೆದಿದೆ. ಮನ್ಸೂರ್ ಶೇಖ್ (28), ರಜಾಕ್ (6) ಅಸ್ವಸ್ಥಗೊಂಡವರು. ಇವರು ಭಟ್ಕಳ ಮೂಲದವರಾಗಿದ್ದು, ಗೋಕರ್ಣದ ಮನೆಯೊಬ್ಬರ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಈ ವೇಳೆ ತದಡಿ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ.
ಮನೆಯ ಮುಂದೆ ಕಟ್ಟಿದ್ದ ನಾಯಿಯನ್ನು ಎಳೆದೊಯ್ದಲು ಬಂದ ಚಿರತೆ: ಮನೆಯವರು ಎಚ್ಚರಗೊಂಡು ಲೈಟ್ ಹಾಕಿದ ಬಳಿಕ ಎಸ್ಕೇಪ್
ಇನ್ನೇನು ಮುಳುಗುವ ಹಂತ ತಲುಪಿದ್ದ ಇವರನ್ನ ಸಮೀಪದಲ್ಲೇ ಇದ್ದ ಬೋಟ್ ಸಿಬ್ಬಂದಿಯಿoದ ರಕ್ಷಣೆ ಮಾಡಿದ್ದಾರೆ.ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಗೋಕರ್ಣ