ಹೊನ್ನಾವರ: ಇತ್ತಿಚೆಗೆ ಕಾಡಿನಿಂದ ನಾಡಿಗೆ ಆಗಮಿಸುವ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಚಿರತೆಗಳ ಹಾವಳಿ ಮೀತಿಮೀರಿದೆ. ಮನೆಯ ಬಾಗಿಮುಂದೆ ಕಟ್ಟಿದ್ದ ನಾಯಿಯನ್ನು ಚಿರತೆಯೊಂದು ಸೆರೆಹಿಡಿಯಲು ಆಗಮಿಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಮನೆಯೊಂದರ ಅಂಗಳಕ್ಕೆ ಮುಂಜಾನೆ ಚಿರತೆಯೊಂದು ಆಗಮಿಸಿದೆ. ಮನೆಯಂಗಳದಲ್ಲಿ ಇದ್ದ ನಾಯಿ ಹಿಡಿಯಲು ಆಗಮಿಸಿದ ಚಿರತೆಯು ದಾಳಿ ಮಾಡಿರುವ ದೃಶ್ಯಾವಳಿ ತುಣುಕು ಮನೆಯ ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಮುಂಜಾನೆ 4;20ರ ಸುಮಾರಿಗೆ ಈ ಘಟನೆ ನಡೆದಿದ್ದು ನಾಯಿ ಒಂದೆಸಮನೆ ಕೂಗಿರುದರಿಂದ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದೆ.
ನದಿಗೆ ಜಿಗಿದು ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿ ಆತ್ಮಹತ್ಯೆ: ತಂದೆಯ ದೂರಿನಲ್ಲೇನಿದೆ?
ಇತ್ತೀಚಿನ ದಿನದಲ್ಲಿ ಚಿರತೆ ಕಾಟ ಹೊಸಾಕುಳಿ ಸಾಲ್ಕೋಡ್ ಗ್ರಾಮದಲ್ಲಿ ಆತಂಕ ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದರು ಬೋನ್ ಒಳಗೆ ಚಿರತೆ ಹೋಗದೆ ತಪ್ಪಿಸಿಕೊಂಡಿತ್ತು. ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುದಾಗಿ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್, ಹೊನ್ನಾವರ