ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆ

ಮುಂಡಗೋಡ: ಮಹಿಳೆಯೊಬ್ಬರು ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಶವವಾಗಿ ತಾಲೂಕಿನ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ಹುಬ್ಬಳ್ಳಿಯ ಆನಂದ್ ನಂಗರದ ಸುರೇಖಾ ಪರಂಡಿಕರ್ ಶವವಾಗಿ ಪತ್ತೆಯಾದ ಮಹಿಳೆ. ಇವರು ಕಳೆದ ಐದು ದಿನಗಳ ಹಿಂದೆ ತಮ್ಮ ತಾಯಿಯ ಮನೆಯಾದ ಮುಂಡಗೋಡದ ಶಿಡ್ಲಗುಂಡಿಗೆAದು ಹುಬ್ಬಳ್ಳಿಯಿಂದ ಹೊರಟಿದ್ದರು. ಆದರೆ ಅಲ್ಲಿಗೂ ತಲುಪದೆ, ವಾಪಸ್ಸು ಹುಬ್ಬಳ್ಳಿಗೂ ಬಾರದೆ ಕಾಣೆಯಾಗಿದ್ದರು.

ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗ: ದೊಣ್ಣೆ ಏಟಿಗೆ ಕುಸಿದುಬಿದ್ದು ತಾಯಿ ಸಾವು

ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿ ಕೊನೆಗೆ ಹುಬ್ಬಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಮುಂಡಗೋಡ- ಹುಬ್ಬಳ್ಳಿ ರಸ್ತೆಯ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version