ಅಂಕೋಲಾ: ಪಟ್ಟಣದ ಜೈಹಿಂದ್ ಸರ್ಕಲ್ ಬಳಿ ನಿಲ್ಲಿಸಿಟ್ಟಿದ್ದ ಮೋಟಾರು ಬೈಕ್ ಒಂದನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ಮಂಗಳವಾರ ನಡೆದಿದ್ದು ಈ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಪ್ರವಾಸೋದ್ಯಮ ಇಲಾಖೆಯಡಿ ಟೂರಿಸ್ಟ ಗೈಡ್ ಆಗಿ (ಕಾರವಾರ ಸಮುದ್ರ ತೀರದಂಚಿನ ಐಎನ್ಎಸ್ ಚಪೆಲ್ ಯುದ್ಧ ನೌಕಾ ಮ್ಯೂಸಿಯಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಕೋಲಾ ತಾಲೂಕಿನ ಬೊಬ್ರವಾಡ ನಿವಾಸಿ ವಿಜಯ ಗಣಪತಿ ನಾಯ್ಕ , ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗುವಾಗ,ತಮ್ಮ (ಕೆ.ಎ30 ಎಲ್ 5144 ನೋಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್) ಮೋಟಾರು ಬೈಕನ್ನು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಜೈಹಿಂದ್ ಸರ್ಕಲ್ ಬಳಿ ನಿಲ್ಲಿಸಿ, ಬಳಿಕ ಬಸ್ ಮೂಲಕ ಕಾರವಾರಕ್ಕೆ ಕರ್ತವ್ಯಕ್ಕೆ ತೆರಳಿದ್ದರು.
ಬೈಕ್ ಮತ್ತು ಕಾರ್ ನಡುವೆ ಅಪಘಾತ: ಪ್ರಸಿದ್ಧ ಯಕ್ಷಗಾನ ಭಾಗವತರ ಸಾವು
ಕೆಲಸ ಮುಗಿಸಿ ಸಂಜೆ 8 ರ ಸುಮಾರಿಗೆ ಮರಳಿ ಬಂದು ನೋಡಿದಾಗ ತಾವು ನಿಲ್ಲಿಸಿಟ್ಟು ಹೋದ ಬೈಕ್ ಸ್ಥಳದಲ್ಲಿ ಇಲ್ಲದಿರುವುದು ಕಂಡು, ಎಲ್ಲಾ ಕಡೆ ಹುಡುಕಿದರೂ ಸಿಗದೇ ಇರುವ ಕಾರಣ ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ಜೈ ಹಿಂದ್ ಸರ್ಕಲ್ ಬಳಿ ಇರುವ ಸಿ ಸಿ ಕ್ಯಾಮೆರಾದಲ್ಲಿ ಬೈಕ್ ನಿಲ್ಲಿಸಿರುವುದು,ಮತ್ತಿತರ ದೃಶ್ಯಾವಳಿಗಳು ದಾಖಲಾಗಿರುವ ಸಾಧ್ಯತೆಯಿದ್ದು,ಪೋಲಿಸ್ ತನಿಕೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ಇತ್ತೀಚಿನ ಪ್ರತ್ಯೇಕ ಪ್ರಕರಣ ಒಂದರಲ್ಲಿ ಪಿಎಂ ಪ್ರೌಢಶಾಲೆ ಹತ್ತಿರದ ಮನೆಯೊಂದರ ಮುಂದೆ ನಿಲ್ಲಿಸಿಟ್ಟ ಬೈಕ್ ಕಳ್ಳತನ ಪ್ರಕರಣವನ್ನು,ಶೀಘ್ರವಾಗಿ ಭೇದಿಸಿದ್ದ ಪೊಲೀಸರು,ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಸ್ಮರಿಸಿಕೊಳ್ಳುತ್ತಿರುವ ಸಾರ್ವಜನಿಕರು,ಈ ಪ್ರಕರಣದಲ್ಲಿಯೂ ಪೊಲೀಸರ ಚುರುಕಿನ ತನಿಖೆಯನ್ನು ನಿರೀಕ್ಷಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ