ಚಂಡಮಾರುತ ಅಬ್ಬರ : ಕಾರವಾರದಲ್ಲಿ ರಕ್ಷಣೆ ಪಡೆದ ಬೋಟ್ ಗಳು

ಕಾರವಾರ: ತಮಿಳುನಾಡು ಕರಾವಳಿಯಲ್ಲಿ ಮಾಂಡೌಸ್ ಚಂಡಮಾರುತದ ಪ್ರಭಾವ ಹೆಚ್ಚಾದ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿಯೂ ಆತಂಕ ಶುರುವಾಗಿದ್ದು, ಮೀನುಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್‌ಗಳು ಕಾರವಾರದ ಸುರಕ್ಷಿತ ಪ್ರದೇಶಕ್ಕೆ ಮರಳಿವೆ. ರಾಜ್ಯದ ಸರ್ವಋತು ಬಂದರು ಖ್ಯಾತಿಯ ಕಾರವಾರದ ಬೈತಖೋಲ್ ಬಂದರು ಪ್ರದೇಶದಲ್ಲಿ ತಮಿಳುನಾಡು ಮೂಲದ 20 ಸೇರಿ ವಿವಿಧ ಭಾಗದ ನೂರಕ್ಕೂ ಅಧಿಕ ಬೋಟ್‌ಗಳು ಲಂಗರು ಹಾಕಿ ನಿಂತಿವೆ.

ಹಾಡುಹಗಲೇ ನಿಲ್ಲಿಸಿಟ್ಟ ಬೈಕ್ ಕಳ್ಳತನ: ಯುದ್ಧ ನೌಕಾ ಮ್ಯೂಸಿಯಂ ಡ್ಯೂಟಿಗೆ ಹೋಗಿ ಬರುವುದರೊಳಗೆ ಕದ್ದ ಕಳ್ಳರಾರು ?

ಆಳಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ವೇಗವಾಗಿ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸಲು ಅಪಾಯಕಾರಿಯಾಗಿದೆ.
ಈ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದ ಹಿನ್ನೆಲೆ ಜಿಲ್ಲೆ, ಹೊರಜಿಲ್ಲೆ ಸೇರಿದಂತೆ ಹೊರರಾಜ್ಯದ ಆಳಸಮುದ್ರ ಮೀನುಗಾರಿಕಾ ಬೋಟ್‌ಗಳು ದಡದತ್ತ ವಾಪಸ್ಸಾಗುತ್ತಿವೆ. ಜಿಲ್ಲೆಯ ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು ಇನ್ನೆರಡು ದಿನ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version