ಶಿರಸಿ: ಬಗೆಹರಿಯದ ಅರಣ್ಯ ಭೂಮಿ ಹಕ್ಕು ವಂಚಿತರ ಹಕ್ಕಿನ ನಿರೀಕ್ಷೆ ಹಾಗೂ ಸುಫ್ರೀಂ ಕೋರ್ಟಿನ ಆದೇಶ ಆಗುವ ಆತಂಕದಲ್ಲಿ ಡಿಸೆಂಬರ್ 17 ರಂದು ಶಿರಸಿಯಲ್ಲಿ ಸಮಸ್ಯೆಗಳನ್ನ ಮುಂದಿಟ್ಟು ಹೇಚ್ಚಿನ ಒತ್ತಡ ಹೇರುವ ತಂತ್ರಗಾರಿಕೆಯ ಮೇರೆಗೆ ರಾಜ್ಯ ಮಟ್ಟದ ಅರಣ್ಯವಾಸಿಗಳ ರ‍್ಯಾಲಿ- ಅರಣ್ಯವಾಸಿಗಳನ್ನ ಉಳಿಸಿ ಎಂಬ ಶಿರೋನಾಮೆಯ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. ಅವರು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸುತ್ತಾ ಮೇಲಿನಂತೆ ಹೇಳಿದರು.
ವಿದೇಶದಲ್ಲಿ ಭಾರೀ ಬೇಡಿಕೆ ಇರುವ ಅಪರೂಪದ ಕಡಲಜೀವಿ ಕಾರವಾರದ ಸಮುದ್ರ ತೀರದಲ್ಲಿ ಪತ್ತೆ
ಕಾರ್ಯಕ್ರಮಕ್ಕೆ ಕರ್ನಾಟಕ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅರೇಬೈಲ್ ಶಿವರಾಮ ಹೇಬ್ಬಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ, ಮಾಜಿ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್, ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ, ತಂಜೀಮ್ ಅಧ್ಯಕ್ಷರಾದ ಇನಾಯತ್ ಸಾಬಂದ್ರಿ ಹಾಗೂ ಜಿಲ್ಲೆಯ ಶಾಸಕರುಗಳನ್ನ ಹೋರಾಟಗಾರರ ವೇದಿಕೆಯು ಆಹ್ವಾನಿಸಿದೆ ಹಾಗೂ ವಿಶೇಷ ಆಮಂತ್ರಿತರಾಗಿ ಸಾಮಾಜಿಕ ಹೋರಾಟಗಾರರಾದ ಕಾಗೋಡ ತಿಮ್ಮಪ್ಪ ಅವರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಅವರು ಉಪಸ್ಥಿತರಿರುವರೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ರಾಜ್ಯಾದ್ಯಂತ ೧೬ ವಿವಿಧ ಜಿಲ್ಲೆಗಳಿಂದ ಅರಣ್ಯವಾಸಿಗಳು ಭಾಗವಹಿಸುವ ರ‍್ಯಾಲಿಯಲ್ಲಿ ಅರಣ್ಯವಾಸಿಗಳ ಪ್ರಮುಖ ೫ ಬೇಡಿಕೆಗಳನ್ನ ಹೋರಾಟಗಾರರ ವೇದಿಕೆಯು ಮಂಡಿಸಲಿದೆ. ಅಲ್ಲದೇ, ಸಂಘಟನೆಯ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ೧೨೯ ಗ್ರಾಮ ಪಂಚಾಯತಗಳಲ್ಲಿ ಪೂರ್ವಭಾವಿ ಸಭೆ ಹಾಗೂ ಕರ್ನಾಟಕದ ೧೨ ಜಿಲ್ಲೆಗಳಲ್ಲಿ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವ್ವದಲ್ಲಿ ಜಾಗೃತ ಸಭೆ ಸಂಘಟಿಸಲಾಗಿದೆ. ಎಂದು ವೇದಿಕೆಯ ಪ್ರಕಟಣೆಯು ತಿಳಿಸಿದೆ. ಈ ಸಂದರ್ಭದಲ್ಲಿ ಇಬ್ರಾಹಿಂ ಗೌಡಳ್ಳಿ, ಮಂಜುನಾಥ ನಾಯ್ಕ ಹಳ್ಳಿಬೈಲ್, ಚಿನ್ಮಯ್ ನಾಯ್ಕ ಸಣ್ಣಳ್ಳಿ, ತಿಮ್ಮಪ್ಪ ಬೀರ ನಾಯ್ಕ ಹಳ್ಳಿಬೈಲ್ ಮುಂತಾದವರು ಉಪಸ್ಥಿತರಿದ್ದರು.