ಕ್ಲಾಸ್ ಬಿಟ್ಟು ವ್ಯಾಪಾರಕ್ಕಿಳಿದ ವಿದ್ಯಾರ್ಥಿಗಳು: ವ್ಯಾಪಾರಕ್ಕೆ ಮುಗ್ಗಿಬಿದ್ದ ಜನ!

ಕಾರವಾರ: ಪ್ರತಿನಿತ್ಯ ಕ್ಲಾಸಲ್ಲಿ ಪಾಠ ಕೇಳಬೇಕಾದ ವಿದ್ಯಾರ್ಥಿಗಳೆಲ್ಲಾ ಇವತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ರು. ಕಾಲೇಜಿನ ಕ್ಯಾಂಪಸ್ ಇವತ್ತು ವಿವಿಧ ಸ್ಟಾಲ್‌ಗಳಿಂದ ತುಂಬಿದ್ದು ವಿದ್ಯಾರ್ಥಿಗಳೇ ಬಗೆ ಬಗೆಯ ತಿಂಡಿ ತಿನಿಸುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ರು. ವಿದ್ಯಾರ್ಥಿಗಳ ಜೊತೆ ಶಿಕ್ಷಕರೂ ಸಹ ಸ್ಟಾಲ್‌ಗಳಿಗೆ ಭೇಟಿಕೊಟ್ಟು ತಮ್ಮ ವಿದ್ಯಾರ್ಥಿಗಳು ತಯಾರಿಸಿದ ಖಾದ್ಯಗಳನ್ನ ಸವಿದು ಖರೀದಿಸಿ ಎಂಜಾಯ್ ಮಾಡಿದ್ರು. ಅರೇ ಇದೇನಪ್ಪಾ ವಿದ್ಯಾರ್ಥಿಗಳು ಯಾಕೆ ವ್ಯಾಪಾರ ಮಾಡ್ತಿದ್ದಾರೆ. ಏನಿತ್ತು ಇವತ್ತು ಕಾಲೇಜ್‌ನಲ್ಲಿ ಅಂತೀರಾ. ಹಾಗಿದ್ರೆ ಈ ಸ್ಟೋರಿ ನೋಡಿ.

ನಡುರಸ್ತೆಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರ ಕದ್ದಿದ್ದ ಆರೋಪಿ ಅಂದರ್ : ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕರಾವಳಿ ನಗರಿ ಕಾರವಾರದ ದಿವೇಕರ್ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಇವತ್ತು ವಿದ್ಯಾರ್ಥಿಗಳ ಓಡಾಟ ಜೋರಾಗಿತ್ತು. ಕಾಲೇಜಿನ ಆವರಣದಲ್ಲಿ ವಿವಿಧ ಸ್ಟಾಲ್‌ಗಳು ತಲೆ ಎತ್ತಿದ್ದು ವಿದ್ಯಾರ್ಥಿಗಳು ವ್ಯಾಪಾರ ವಹಿವಾಟಿನಲ್ಲಿ ಫುಲ್ ಬ್ಯುಸಿಯಾಗಿದ್ರು. ಅರೇ ಇದೇನ್ರಿ ಮಕ್ಕಳು ಓದೋದನ್ನ ಬಿಟ್ಟು ವ್ಯಾಪಾರಕ್ಕೆ ಇಳಿದ್ರಾ ಅಂತಾ ಆಶ್ಚರ್ಯ ಪಡಬೇಡಿ. ಕಾಲೇಜಿನವರು ತಮ್ಮ ವಿದ್ಯಾರ್ಥಿಗಳಿಗೋಸ್ಕರವೇ ಆಯೋಜಿಸಿದ್ದ ವಿಶೇಷ ಕ್ರಿಯೇಟಿವಿಟಿ ಫೆಸ್ಟ್ನ ಝಲಕ್ ಇದು. ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಜ್ಞಾನ ಸಿಗುವಂತಾಗಲೀ ಎನ್ನುವ ಉದ್ದೇಶದಿಂದ ಈ ರೀತಿಯ ಫೆಸ್ಟ್ನ್ನ ಆಯೋಜಿಸಲಾಗಿತ್ತು.

ದಿವೇಕರ್ ವಾಣಿಜ್ಯ ಕಾಲೇಜು ಹಾಗೂ ಸ್ನಾತ್ತಕೋತ್ತರ ಪದವಿ ವಿಭಾಗದ ಸಹಯೋಗದಲ್ಲಿ ನಡೆಸಲಾದ ಈ ಕ್ರಿಯೇಟಿವಿಟಿ ಮೇಳದಲ್ಲಿ ಫುಡ್‌ಕೋರ್ಟ್ ವಿಶೇಷವಾಗಿತ್ತು. 5 ರಿಂದ 6 ವಿದ್ಯಾರ್ಥಿಗಳು ಒಂದು ತಂಡದoತೆ ಹಣ ಹೂಡಿಕೆ ಮಾಡಿ ತಿಂಡಿ ತಿನಿಸುಗಳ 12 ಸ್ಟಾಲ್ ಹಾಗೂ ಮನರಂಜನೆ ಆಟಗಳ ಸ್ಟಾಲ್‌ಗಳನ್ನ ಹಾಕಿದ್ದರು. ಸ್ಟಾಲ್‌ಗಳಲ್ಲಿ ಇರಿಸಿದ್ದ ಆಹಾರ ಪದಾರ್ಥಗಳನ್ನ ಸಹ ವಿದ್ಯಾರ್ಥಿಗಳೇ ತಯಾರಿಸಿದ್ದು ಗ್ರಾಹಕರನ್ನ ತಮ್ಮ ಸ್ಟಾಲ್‌ಗಳತ್ತ ಸೆಳೆಯುವ ಮೂಲಕ ತಮ್ಮ ವ್ಯಾವಹಾರಿಕ ಕೌಶಲ್ಯವನ್ನ ಪ್ರದರ್ಶಿಸಿದ್ರು. ಪ್ರತಿನಿತ್ಯ ಪಾಠ ಪ್ರವಚನದಲ್ಲೇ ಇರುವ ವಿದ್ಯಾರ್ಥಿಗಳಿಗೆ ರಿಲ್ಯಾಕ್ಸ್ ಆಗುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನ ಖುದ್ದು ವ್ಯಾಪಾರ, ವಹಿವಾಟಿನಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಡೆದುಕೊಳ್ಳಲು ಸಹಕಾರಿಯಾಗಲು ಈ ಕ್ರಿಯೇಟಿವಿಟಿ ಫೆಸ್ಟ್ ಆಯೋಜಿಸಿದ್ದು ವಿದ್ಯಾರ್ಥಿಗಳೂ ಸಹ ಖುಷಿಯಿಂದಲೇ ತೊಡಗಿಸಿಕೊಂಡಿದ್ದಾರೆ ಅಂತಾರೇ ಕಾಲೇಜಿನ ಪ್ರಾಂಶುಪಾಲರು.

ಇನ್ನು ಕ್ರಿಯೇಟಿವಿಟಿ ಫೆಸ್ಟ್ನಲ್ಲಿ ಲೋಗೋ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು ವಿವಿಧ ಕಂಪೆನಿಗಳ ಸುಮಾರು 46 ರಂಗೋಲಿಗಳನ್ನ ಹಾಕಲಾಗಿತ್ತು. ಜೊತೆಗೆ ಮೂರು ಕೊಠಡಿಗಳಲ್ಲಿ ವಿಜ್ಞಾನ, ವಾಣಿಜ್ಯಕ್ಕೆ ಸಂಬAಧಿಸಿದ ಸುಮಾರು 26 ವಿವಿಧ ಮಾದರಿಗಳನ್ನ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದರು. ವಿಶೇಷವಾಗಿ ಆಹಾರಮೇಳದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದು ಉತ್ತಮವಾಗಿ ವ್ಯಾಪಾರ ನಡೆಸಿದ್ರು. ಒಟ್ಟೂ 12 ತಂಡಗಳು ಮಳಿಗೆಗಳನ್ನ ಇರಿಸಿದ್ದವು.

ಒಟ್ಟಾರೇ ಕ್ರಿಯೇಟಿವಿಟಿ ಫೆಸ್ಟ್ ಕಾರ್ಯಕ್ರಮದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನ ಒದಗಿಸಿದಂತಾಗಿದ್ದು ವಿದ್ಯಾರ್ಥಿಗಳಂತೂ ಫುಲ್ ಖುಷ್ ಆಗಿದ್ದಂತೂ ಸತ್ಯ. ಇಂತಹ ಫೆಸ್ಟ್ಗಳು ಎಲ್ಲ ಕಾಲೇಜುಗಳಲ್ಲೂ ಆಯೋಜನೆಯಾಗುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲೀ ಅನ್ನೋದೇ ನಮ್ಮ ಆಶಯ.

ವಿಸ್ಮಯ ನ್ಯೂಸ್ ಕಾರವಾರ

Exit mobile version