Big NewsImportant
Trending

ಕಳೆದ 10 ದಿನಗಳಲ್ಲಿ 5 ಜಾನುವಾರು ಹಿಡಿದಿದ್ದ ಹುಲಿ: ರೈತರ ಕೊಟ್ಟಿಗೆಯೊಳಗೆ ನುಗ್ಗಿ ಬೇಟೆಯಾಡುತ್ತಿದ್ದ ಟೈಗರ್ ಕೊನೆಗೂ ಬೋನಿನಲ್ಲಿ ಸೆರೆ

ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸಿದ ಅರಣ್ಯ ಇಲಾಖೆ

ಜೊಯಿಡಾ : ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜೀವಿ ವಲಯದ ಕಳ್ನೆಯಲ್ಲಿ ರೈತರ ಕೊಟ್ಟಿಗೆಯೊಳಗೆ ನುಗ್ಗಿ ನಿರಂತರವಾಗಿ ಜಾನುವಾರುಗಳನ್ನು ಹಿಡಿಯುತ್ತಿದ್ದ ಹುಲಿಂ, ಇದೀಗ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಜನರ ಸುರಕ್ಷತೆ ದೃಷ್ಟಿಯಿಂದ ಮತ್ತು ಹುಲಿಗೆ ಚಿಕಿತ್ಸೆ ನೀಡುವ ಕಾರಣಕ್ಕೆ ಹಂಪಿಯ ಮೃಗಾಲಯಕ್ಕೆ ಈ ಹುಲಿಯನ್ನು ಸಾಗಿಸಿದ್ದಾರೆ. ಹೌದು, ಕಳೆದ ಎರಡು ವಾರಗಳಿಂದ ಪಣಸೋಲಿ ಮತ್ತು ಗುಂದ ವನ್ಯಜೀವಿ ವಲಯದ ಜನರ ಆತಂಕಕ್ಕೆ ಕಾರಣವಾಗಿದ್ದ ಹುಲಿ ಕೊನೆಗೂ ಸೇರೆಯಾಗಿದೆ. ಉಳವಿ, ಗುಂದ ಚಂದ್ರಾಳಿ ಮತ್ತು ಚಾಪೆರಾ,ಹೆಣಕೊಳ ಸುತ್ತಲಿನ ಜನರಲ್ಲಿ ಮೂಡಿದ್ದ ಆತಂಕ ಈ ಮೂಲಕ ದೂರವಾಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಪಣಸೋಲಿ ವಲಯದಲ್ಲಿ ಕಳೆದ 10 ದಿನಗಳಿಂದ ಹುಲಿ ದಾಳಿಯಿಂದ ಒಟ್ಟೂ 5 ಜಾನುವಾಗಳು ಸಾವನ್ನಪ್ಪಿ 3 ದನಗಳು ಗಾಯಗೊಂಡ ಘಟನೆ ನಡೆದಿತ್ತು. ಭಾನುವಾರ ರಾತ್ರಿ ಕೂಡಾ ಈ ಹುಲಿ ಮತ್ತೆರೆಡು ಧನಗಳನ್ನು ಗಾಯಗೊಳಿಸಿರುವ ಘಟನೆ ನಡೆದಿತ್ತು.

ನಡುರಸ್ತೆಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರ ಕದ್ದಿದ್ದ ಆರೋಪಿ ಅಂದರ್ : ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕಳೆದ ಒಂದು ವಾರದಿಂದ ಹುಲಿ ಸಂಚರಿಸುವ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಕ್ಯಾಮರಾ ಟ್ರಾಪ್ ಅಳವಡಿಸಿ ಹುಲಿಯ ಗುರುತಿಸುವ ಬಗ್ಗೆ,ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು. ಈ ಹುಲಿ ಹೆಣ್ಣು ಹುಲಿಯಾಗಿದ್ದು, ಸುಮಾರು 6 ರಿಂದ 7 ವರ್ಷ ವಯಸ್ಸು ಇರಬಹುದು ಹೇಳಲಾಗುತ್ತಿದೆ. ಕಳೆದ ನಾಲ್ಕು ವರ್ಷದ ಹಿಂದೆ ಕೂಡಾ ಅಣಶಿಭಾಗದಲ್ಲಿ ಈ ಹುಲಿ ಕ್ಯಾಮರಾ ಟ್ರಾಪ್ ನಲ್ಲಿ ಸೆರೆಯಾಗಿತ್ತು ಎನ್ನಲಾಗುತ್ತಿದೆ. ವಯಸ್ಸಿನ ಕಾರಣವೂ ಅಥವ ಅನಾರೋಗ್ಯವೋ ಇದು ನಾಡಿನತ್ತ ಮುಖ ಮಾಡಿದೆ. ಕಾಡಿನೊಳಗೆ ತನ್ನ ಬೇಟೆ ಪ್ರಾಣಿಗಳನ್ನು ಬೇಟೆಯಾಡುವ ಶಕ್ತಿ ಕಳೆದುಕೊಳ್ಳುತ್ತಿರುವ ಈ ಹುಲಿ ಊರೊಳಗೆ ಬರುವ ದಿನಗಳಲ್ಲಿ ಈ ಹುಲಿ ಮನುಷ್ಯರ ಮೇಲೂ ದಾಳಿಮಾಡುವ ಸ್ಥಿತಿ ಇರುವ ಕಾರಣ ಈ ಕ್ರಮ ವಹಿಸಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಅಧಿಕಾರಿಗಳು ತಕ್ಷಣ ಈ ಹುಲಿಯನ್ನು ಸೆರೆಹಿಡಿಯುವ ಬಗ್ಗೆ ಮೇಲಾಧಿಕಾರಿಗಳಿಂದ ಮಾರ್ಗದರ್ಶನ ಪಡೆದು ಹುಲಿ ಸೆರೆ ಹಿಡಿದಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ ತಾಲೂಕಿನ ಉಳವಿಗೆ ಆಗಮೀಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸ್ಥಳಿಯ ಜನರ ಮನವಿಯ ಮೇರೆಗೆ ಕಾಳಿ ಹುಲಿ ಸಂರಕ್ಷೀತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿಗಳೊoದಿಗೆ ದೂರವಾಣಿಯಲ್ಲಿ ಮಾತನಾಡಿ ಈ ಬಗ್ಗೆ ಕ್ರಮ ಜರುಗಿಸುವಂತೆ ಸೂಚಿಸಿದ್ದರು. 2014ರ ನವೆಂಬರ್-ಡಿಸೆoಬರ್ ತಿಂಗಳಲ್ಲಿ ಅನಹುತ ಸೃಷ್ಠಿಸಿದ ಚಿಕ್ಕಮಂಗಳೂರಿನ ಪಂಡರವಳ್ಳಿ ಹುಲಿಯ ನೆನಪು ಈಗ ಇತಿಹಾಸ. ಜೀವನ ಪಾಠ,ಬೇಟೆಯ ಕೌಶಲ್ಯ ಕಲಿಯುವ ಹಂತದಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟ ಮರಿ ಹುಲಿ ಸಾಕು ದನಗಳ,ಮನುಷ್ಯರ ಬೇಟೆಗೆ ನಿರಂತವಾಗಿ ಸಾಕುದನಗಳ ಹಿಡಿದು ನಂತರ ನರಭಕ್ಷಕವಾದ ಹುಲಿಯನ್ನು ಹಿಡಿದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಗ್ಗಿ ಕಾಡಿಗೆ ಬಿಡುವ ಪ್ರಯತ್ನ ನಡೆದಿತ್ತು. ಇಲ್ಲಿನವರ ವಿರೋಧದಿಂದಾಗಿ ಖಾನಾಪುರ ತಾಲೂಕಿನ ಭೀಮಗಡ ಅರಣ್ಯ ವ್ಯಾಪ್ತಿಯಲ್ಲಿ ಬಿಟ್ಟ ನಂತರ ಮತ್ತೆ ಮತ್ತೆ ಜನವಸತಿ ಪ್ರದೇಶದೊಳಗೆ ನುಗ್ಗಿ ಸಾಕುದನಗಳ,ಮಾನವರ ಹತ್ಯೆ ನಡೆಸಿದ್ದು ರಾಜ್ಯ ಸರಕಾರವನ್ನೆ ಬೆಚ್ಚಿ ಬೀಳಿಸುವ ಘಟನೆ ಜರುಗಿತ್ತು.

ಅರಣ್ಯ ಇಲಾಖೆ, ಹುಲಿ ಸಂರಕ್ಷೀತ ಪ್ರದೇಶದ ಅಧಿಕಾರಿಗಳು ಹಳೆ ಘಟನೆ ನೆನಪಿಸಿಕೊಂಡು ಈ ಪ್ರಕರಣದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ತಕ್ಷಣ ಮುಂಜಾಗತೆ ವಹಿಸಿ ಹುಲಿ ಜಾನುವಾರುಗಳನ್ನು ಹಿಡಿದ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿ,ಹುಲಿಯ ಚಲನ ವಲನ ಅಭ್ಯಸಿಸಿ ಹುಲಿ ಬೋನಿನಲ್ಲಿ ಸೇರೆಯಾಗುವಂತೆ ಮಾಡುವ ಜೋತೆಗೆ ಸ್ವಲ್ಪ ಅನಾರೋಗ್ಯ ಪಿಡಿತವಾದಂತೆ ಕಂಡುಬರುವ ಸ್ಥಳೀಯರ ಸುರಕ್ಷೆ ಮತ್ತು ಈ ಹುಲಿಯನ್ನು ಮತ್ತು ಚಿಕಿತ್ಸೆ ನೀಡುವ ಕಾರಣ ಹಂಪಿಯ ಮೃಗಾಲಯಕ್ಕೆ ಈ ಹುಲಿಯನ್ನು ಸಾಗಿಸಲಾಗಿದೆ ಸ್ಥಳಿಯರ ಆತಂಕ ದೂರವಾಗಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button