ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ: ಗುಲಾಬಿ ಹೂ ನೀಡಿ ಉಚಿತವಾಗಿ ಹೆಲ್ಮೆಟ್ ನೀಡಿ ಅರಿವು ಮೂಡಿಸಿದ ಪೊಲೀಸರು
ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ ಭಟ್ಕಳ, ಅಭಿಯೋಜನೆ ಇಲಾಖೆ ಹಾಗೂ ಭಟ್ಕಳ ಪೊಲೀಸ ಇಲಾಖೆಯ ಇವರ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ ಸಂಚಾರಿ ನಿಯಮಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಇಲ್ಲಿನ ಸಂಸುದ್ದಿನ್ ಸರ್ಕಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ತಾಲೂಕಾ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ಜಡ್ಜ್ ಶ್ರೀಕಾಂತ ಕುರಾಣಿ ಈ ಜಾಗ್ರತಿ ಕಾರ್ಯಕ್ರಮದ ಮುಖ್ಯ ಉದ್ದೇಶ ದ್ವಿಚಕ್ರ ವಾಹನಗಳ ಅಪರಾಧವನ್ನು ತಡೆಯುವುದು. ಇತ್ತೀಚಿನ ದಿನಗಳ ಬಹಳ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿದೆ. ಆ ದ್ರಷ್ಟಿಯಿಂದಾಗಿ ಈ ಜಾಗ್ರತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಉದಾಹರಣೆಗೆ ಭಟ್ಕಳ ತಾಲೂಕಿನಲ್ಲಿ ಶೇಕಡಾ 99 ರಷ್ಟು ವಾಹನ ಚಾಲಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಸಾರ್ವಜನಿಕರು ಹಾಗೂ ವಾಹನ ಚಾಲಕರು ತಮ್ಮ ವಾಹನದಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಡಿ.ಎಲ್, ಇನ್ಸುರೆನ್ಸ್ ಹಾಗೂ ಇನ್ನುಳಿತದ ಟ್ರಾಫಿಕ್ ರೂಲ್ಸ್ ಗಳನ್ನು ಪಾಲನೆ ಮಾಡಬೇಕು ಎಂದರು.
ನoತರ ಕಾರ್ಯಕ್ರಮದ ಅಥಿತಿಯಾಗಿ ಆಗಮಿಸಿದ ಡಿ.ವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಮಾತನಾಡಿ ಇಂದಿನ ದಿನದಲ್ಲಿ ನ್ಯಾಯವಾದಿಗಳು ರಸ್ತೆಗಿಳಿದು ಸಾರ್ವಜನಿಕರಿಗೆ ಜಾಗ್ರತಿ ಮುಡಿಸುವ ವ್ಯವಸ್ಥೆಗೆ ಬಂದು ನಾವು ಮುಟ್ಟಿದ್ದೇವೆ. ಇಂತಹ ಜಾಗ್ರತಿ ಕಾರ್ಯಕ್ರಮ ಯಾಕೆ ಮಾಡುತ್ತಿದ್ದಾರೆ ಎಂದು ಜನರು ಮುಖ್ಯವಾಗಿ ತಿಳಿದುಕೊಳ್ಳಬೇಕಿದೆ ಎಂದರು. ಇದಕ್ಕೂ ಪೂರ್ವದಲ್ಲಿ ಸಾಂಕೇತಿಕವಾಗಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತುದ್ದ ಸುಮಾರು 10 ಪ್ರಯಾಣಿಕರನ್ನು ತಡೆದು ವಾಹನ ಸಂಚಾರ ವೇಳೆ ಸಂಚಾರ ನಿಯಮ ಪಾಲಿಸುವಂತೆ ಅರಿವು ಮೂಡಿಸಿ ಗುಲಾಬಿ ಹೂ ನೀಡಿ ಉಚಿತವಾಗಿ ಹೆಲ್ಮೆಟ್ ನೀಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ಮತ್ತು ಪ್ರದಾನ ನ್ಯಾಯಾಧೀಶರಾದ ಫವಾಜ್ ಪಿ.ಎ , ಭಟ್ಕಳ ವಕೀಲ ಸಂಘದ ಅಧ್ಯಕ್ಷ ಪಾಂಡು ನಾಯ್ಕ, ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ವಿನೋದ ಬಾಳ್ ನಾಯ್ಕ, ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ