ರೇಲ್ವೆ ನಿಲ್ದಾಣದ ಸಮೀಪ ಗಾಂಜಾ ಮಾರಾಟ: 4 ಕೆ.ಜಿಗೂ ಅಧಿಕ ಗಾಂಜಾ ವಶಕ್ಕೆ
ನಾಲ್ವರು ಆರೋಪಿಗಳ ಬಂಧನ
ಕುಮಟಾ: ರೇಲ್ವೆ ನಿಲ್ಧಾಣದ ಸಮೀಪ ಅನಧೀಕೃತವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಅರೋಪಿಗಳನ್ನು ಹಿಡಿಯುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು..ಕುಮಟಾದ ರೈಲ್ವೆ ನಿಲ್ಧಾಣದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುಮಟಾ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಇವರಿಂದ ಕೃತ್ಯಕ್ಕೆ ಬಳಸಲಾದ ಮೋಟಾರು ವಾಹನ ಸಮೇತ 4. ಕೆ.ಜಿ 76 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿರಸಿಯ ವಿನಾಯಕ ಕರ್ನಿಂಗ್, ವಿನಾಯಕ ಅಂಬಿಗ ಮತ್ತು ಭಟ್ಕಳದ ಸಮಿ ಅಬ್ಬಾಸ್ ಮಲ್ಪಾ ಇವರು ಬಂಧಿತ ಆರೋಪಿಗಳು.
ಚಪ್ಪಲಿ ತುಂಬುವ ಬಾಕ್ಸ್ ನಲ್ಲಿ ರಸ್ತೆಯ ಪಕ್ಕದಲ್ಲಿ ನವಜಾತ ಶಿಶು ಪತ್ತೆ : ಹೆತ್ತತಾಯಿಗೆ ಬೇಡವಾದ ಮಗು
ಇಂದು ಬಂಧಿಸಲಾದ ಮೂವರ ಪೈಕಿ ಇಬ್ಬರು ಈ ಹಿಂದೆ ಕೊಲೆ, ದರೋಡೆ, ಕಳ್ಳತನ ಹಾಗೂ ಗಾಂಜಾ ಮಾರಾಟ ಮತ್ತು ಸಾಗಾಟ ಪ್ರಕರಣದಲ್ಲಿ ಬಂಧಿಯಾದವರಾಗಿದ್ದಾರೆ. ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಾದ ವಿಷ್ಣವರ್ಧನ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ಇವರ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ತಿಪ್ಪಪ್ಪ ನಾಯ್ಕ, ಪಿ.ಎಸ್.ಐ ರವಿ ಗುಡ್ಡಿ ಅವರ ತಂಡ ದಾಳಿ ನಡೆಸಿದ್ದರು. ಈ ಒಂದು ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಗಣೇಶ ನಾಯ್ಕ, ಗುರು ನಾಯಕ, ಆಸೀಪ್, ಲೊಕೇಶ ಅರಿಸಿಣಗುಪ್ಪಿ, ರಾಜು ನಾಯ್ಕ, ಶಿವಾನಂದ ಜಾಡರ್, ಸಂಜೀವ ನಾಯ್ಕ ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ