ಶಿರಸಿ: ಮೂರು ತಿಂಗಳ ಹಸುಗೂಸೊಂದನ್ನು ಬಾಲಕರ ಬಾಲಮಂದಿರ ಆವರಣದಲ್ಲಿ ನಗರದಲ್ಲಿ ನಡೆದಿದೆ. ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಮು ಪತ್ತೆಯಾಗಿದ್ದು, ಮಗು ಅಳುವ ಧ್ವನಿ ಕೇಳಿದ ಬಾಲಮಂದಿರದ ಮೇಲ್ವಿಚಾರಕರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಆವರಣದಲ್ಲಿ ಬಿಟ್ಟು ತೆರಳಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Railway Recruitment 2022: ಒಟ್ಟು 2422 ಹುದ್ದೆಗಳಿಗೆ ನೇಮಕಾತಿ: SSLC, ITI, PUC ಆದವರು ಅರ್ಜಿ ಸಲ್ಲಿಸಬಹುದು
ಮಗುವು ಅಂಗವೈಕಲ್ಯವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಪೋಷಕರು ಬಿಟ್ಟುಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸ್ಥಳದಲ್ಲಿ ಕ್ಷಮೆಯಾಚನೆ ಪತ್ರವೊಂದು ಸಿಕ್ಕಿದ್ದು, ಇದರಲ್ಲಿ ಮಗುವಿನ ಹುಟ್ಟಿದ ದಿನಾಂಕ ಮತ್ತು ಸಮಯವನ್ನು ಬರೆದಿದ್ದಾರೆ. ಮಗು ಅಂಗವೈಕಲ್ಯವನ್ನು ಹೊಂದಿದ್ದು, ಹೆಚ್ಚಿನ ಚಿಕಿತ್ಸೆ ಬೇಕಿದೆ. ಆದರೆ, ನಾವು ಆರ್ಥಿಕವಾಗಿ ದುರ್ಬಲವಾಗಿರುವುದರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಒಪ್ಪಿಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ವಿಷಯ ತಿಳಿದ ತಕ್ಷಣ ಮಕ್ಕಳ ಸುರಕ್ಷಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಮಕ್ಕಳ ಸುರಕ್ಷಾ ಕಮಿಟಿ ಅಧ್ಯಕ್ಷೆ ಅನಿತಾ ಪರ್ವತೆಕರ್ ಮತ್ತು ಸದಸ್ಯೆ ಅಂಜನಾ ಭಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರದೊಳಗೆ ಕರೆದೊಯ್ದಿದ್ದಾರೆ. ಆರೋಗ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಶಿರಸಿ’