ಹೆದ್ದಾರಿಯಲ್ಲಿಯೇ ಹೊತ್ತಿ ಉರಿದ ಲಾರಿ: ವಾಹನ ಸಮೇತ ಸುಟ್ಟು ಕರಕಲಾದ ಸರಕುಗಳು

ಅಂಕೋಲಾ:  ಸರಕುಗಳನ್ನು ಸಾಗಿಸುತ್ತಿದ್ದ ಭಾರಿ ಗಾತ್ರದ ಲಾರಿ ಒಂದು ರಾ, ಹೆ. 63ರ ಯಲ್ಲಾಪುರ – ಅಂಕೋಲಾ ಮಾರ್ಗ ಮಧ್ಯೆ ವಜ್ರಳ್ಳಿ  ಬಳಿ  ಅದಾವುದೋ ಕಾರಣದಿಂದ ಬೆಂಕಿ ಹೊತ್ತಿ ಉರಿದು ಕರಕಲಾದ ಘಟನೆ ಸಂಭವಿಸಿದೆ. ಮುಂಬೈಯಿಂದ ಕೇರಳ ಕಡೆ ಇದೇ ಲಾರಿಯಲ್ಲಿ ರಾಸಾಯನಿಕ ಪದಾರ್ಥಗಳು ಡ್ರೈ ಫ್ರುಟ್ಸ್ ಮತ್ತಿತರ ಸರಕು – ಸಾಮಾಗ್ರಿಗಳನ್ನು  ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು,ದಾರಿ ಮಧ್ಯ ಸಂಭವಿಸಿದ ಈ ಆಕಸ್ಮಿಕ ಬೆಂಕಿ ಅವಘಡದಿಂದ ಲಾರಿಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದು,  ಹಾನಿಯ ಅಂದಾಜು ತಿಳಿದು ಬರಬೇಕಿದೆ.

ಬೈಕ್, ಸೈಕಲ್ ನಡುವೆ ಅಪಘಾತ: ಬೈಕ್ ಸವಾರ ಸಾವು

ಯಲ್ಲಾಪುರ ಹಾಗೂ ಅಂಕೋಲಾ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸುವ ಕಾರ್ಯ ಕೈಗೊಂಡರು. ಹೆದ್ದಾರಿಯಲ್ಲಿ  ನಡೆದ ಈ  ಅವಘಡದಿಂದ ಬೆಂಕಿಯ ಕೆನ್ನಾಲಿಗೆಗೆ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ ಎನ್ನಲಾಗಿದ್ದು,ದಟ್ಟ ಧೂಮ ಆವರಿಸಿ ಹೆದ್ದಾರಿ ಪ್ರಯಾಣಿಕರು ಸೇರಿ ಹಲವರಲ್ಲಿ  ಕೆಲ ಕಾಲ ಆತಂಕದ ವಾತಾವರಣ   ಕಂಡುಬಂದಿತ್ತು. ಪೊಲೀಸರ ಸಕಾಲಿಕ ಮುನ್ನೆಚ್ಚರಿಕಾ ಕ್ರಮ ಮತ್ತಿತರ ಕಾರಣಗಳಿಂದ,ಅದೃಷ್ಟವಶಾತ್ ಲಾರಿಯ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ.

ಹೆಸ್ಕಾಂ ಸಿಬ್ಬಂದಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಂಕೋಲಾ ಪಿ ಎಸ್ ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳು, ಸುಂಕಸಾಳ ಓ ಪಿ ಸಿಬ್ಬಂದಿಗಳಾದ ಸುಬ್ರಾಯ ಭಟ್ಟ, ಶೇಖರ ಸಿದ್ದಿ ಸ್ಥಳದಲ್ಲಿ ಹಾಜರಿದ್ದು,ಹೆದ್ದಾರಿ ಸಂಚಾರ ವ್ಯತ್ಯಯ ಸರಿಪಡಿಸಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟು ಹೆದ್ದಾರಿ ಇತರೆ ಪ್ರಯಾಣಿಕರ ಆತಂಕ ದೂರ ಮಾಡಿದರು.. ಸ್ಥಳೀಯರು  ಸಹಕರಿಸಿದರು.ಬೆಂಕಿ ಅವಘಡದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version