ಪಿಕ್‌ನಿಕ್ ಗೆ ಬಂದಿದ್ದ SSLC ವಿದ್ಯಾರ್ಥಿ ನೀರು ಪಾಲು? ಗಂಗಾವಳಿ ನದಿ ನೀರಲ್ಲಿ ಕೊಚ್ಚಿ ಹೋದ ಬಾಲಕ

ಅಂಕೋಲಾ: ಪ್ರವಾಸಕ್ಕೆಂದು (ಪಿಕ್‌ನಿಕ್ ) ಗೆಂದು ಸಹಪಾಠಿಗಳ ಜೊತೆ ಬಂದಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಗುಳ್ಳಾಪುರದ ಹೈ ಸ್ಕೂಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಉದ್ದೇಶದಿಂದ ಶಾಲೆಯವರು ಮಕ್ಕಳನ್ನು ಹತ್ತಿರದ ಗಂಗಾವಳಿ ನದಿ ತೀರದ ಬಳಿ ಕರೆತಂದಿದ್ದು, ಕೆಲ ಹೊತ್ತಿನಲ್ಲೇ ವಿದ್ಯಾರ್ಥಿಯೋರ್ವ ಅದಾವುರೋ ಕಾರಣದಿಂದ ಗುಂಪಿನಿಂದ ಬೇರ್ಪಟ್ಟು ನದಿ ತೀರದ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ಕೇಳಿ ಬಂದಿದೆ.

ವಿವಾಹಿತ ಮಹಿಳೆಯ ಖಾಸಗಿ ಫೋಟೋ ಎಡಿಟ್ ಮಾಡಿ ಮಾನಹಾನಿ: ಮೊಬೈಲ್ ಹ್ಯಾಕ್ ಮಾಡಿ ದುಷ್ಕೃತ್ಯ: ಗಂಟೆಗೆ 50 ಸಾವಿರ ಪಡೆಯುತ್ತಿದ್ದ ಹ್ಯಾಕರ್ ಬಂಧನ

ಯಲ್ಲಾಪುರದ ತೆಂಕನಗೇರಿಯ ಪ್ರಕಾಶ್ ವಿಟ್ಟು ಪಟ್ಕರೆ (16) ನೀರಿನಲ್ಲಿ ಕಣ್ಮರೆಯಾದ ದುದೈವಿ ಬಾಲಕ ಎನ್ನಲಾಗಿದ್ದು , ಈತ
ಹಾಸ್ಟೆಲ್ ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದ್ದು, ಸ್ಥಳೀಯ ಮೀನುಗಾರರು , ಅಗ್ನಿ ಶಾಮಕ ದಳ ದವರು ಬಾಲಕನ ಪತ್ತೆಗೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಶೋಧ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ಕಂಡು ಬರುತ್ತಿದ್ದು, ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version