ವಿದ್ಯುತ್ ಬಳಕೆ ಹಾಗೂ ಸಂರಕ್ಷತೆಯ ಕುರಿತು ಅರಿವು ಕಾರ್ಯಕ್ರಮ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಹೆಸ್ಕಾಂ, ಭಟ್ಕಳ ವಿಭಾಗದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ವಿದ್ಯುತ್ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಂಜುನಾಥ್ ಕೆ.ಜಿ “ವಿದ್ಯುತ್ ಜನರ ಬಾಳಿಗೆ ಬೆಳಕಾಗಿದೆ, ಕಾರಣ ಹಿತಮಿತವಾಗಿ ಬಳಸಿ” ಎಂದು ಕರೆನೀಡಿದರು. ಸಹಾಯಕ ಅಭಿಯಂತರರಾದ ಶಿವಾನಂದ ನಾಯ್ಕ ವಿದ್ಯುತ್ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳಬಗ್ಗೆ ಅರಿವು ಮೂಡಿಸಿದರು. ಮತ್ತೋರ್ವ ಸಹಾಯಕ ಅಭಿಯಂತರರಾದ ರಮೇಶ್ ಮೇಸ್ತಾ ವಿದ್ಯುತ್ ಉಪಕರಣಗಳ ಬಗ್ಗೆ ಹಾಗೂ ವಿದ್ಯುತ್ಛಕ್ತಿ ಇಲಾಖೆಯ ಕಾರ್ಯನಿರ್ವಹಣೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಗಂಡನ ಅನುಮಾನಕ್ಕೆ ಬಲಿಯಾದ ಹೆಂಡತಿ: ಸಾವಿಗೆ ಶರಣಾದ ವಿವಾಹಿತೆ

ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಹಾಗೂ ಬಿ.ಸಿ.ಎ ವಿಭಾಗದ ಉಪಪ್ರಾಂಶುಪಾಲರಾದ ವಿಖ್ಯಾತ್ ಪ್ರಭು ರವರು ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ, ಭಟ್ಕಳ ವಿಭಾಗದ ವತಿಯಿಂದ ವಿದ್ಯುತ್ಛಕ್ತಿಯ ಕುರಿತು ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಎಲ್.ಇ.ಡಿ ಬಲ್ಬುಗಳನ್ನು ವಿತರಿಸುವುದರ ಮೂಲಕ ವಿದ್ಯುತ್ ಮಿತಬಳಕೆಯ ಕುರಿತು ಪ್ರೇರೇಪಿಸಲಾಯಿತು.

ವಿಸ್ಮಯ ನ್ಯೂಸ್, ಭಟ್ಕಳ

Exit mobile version