Focus News
Trending

ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕವಲಕ್ಕಿಯಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಹೊನ್ನಾವರ: ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯಲ್ಲಿ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ.ಉಮೇಶ ವಿ. ಹೆಗಡೆ ಅಬ್ಳಿ ಅವರು ವಹಿಸಿದ್ದರು. ಮುಖ್ಯಅತಿಥಿಯಾಗಿ ಶ್ರೀ ಎಮ್.ಎಸ್ ಹೆಗಡೆಯವರು ಹಾಗೂ ಉಧ್ಘಾಟಕರಾಗಿ ಶ್ರೀ ಭಾರತೀಎಜ್ಯುಕೇಶನ್‌ನ ಟ್ರಸ್ಟಿಗಳಾದ ಶ್ರೀ ವಿ.ಜಿ ಹೆಗಡೆಯವರು ಆಗಮಿಸಿದ್ದರು. ಉಧ್ಘಾಟಕರಾದ ವಿ.ಜಿ ಹೆಗಡೆಯವರು ಮಾತನಾಡಿ ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಮತ್ತು ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಕರೆಕೊಟ್ಟರು.

ಮುಖ್ಯ ಅತಿಥಿಗಳಾದ ಎಮ್.ಎಸ್ ಹೆಗಡೆಯವರು ಮಾತನಾಡಿ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದಂತಹ ವಿದ್ಯಾರ್ಥಿಗಳಿಗೆ ಶುಭಕೋರಿದರು. ಮತ್ತು ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.ಮತ್ತು ಅಧ್ಯಕ್ಷರಾದ ಶ್ರೀ.ಉಮೇಶ ವಿ. ಹೆಗಡೆ ಅಬ್ಳಿಯವರು ಮಾತನಾಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹವನ್ನು ನೀಡಿದರು ಮತ್ತು ನಮ್ಮ ಶಾಲೆಯ ಶಿಕ್ಷಕರ ಕೆಲಸವನ್ನು ಶ್ಲಾಘಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Related Articles

Back to top button