ಅಂಕೋಲಾ ಮುಲ್ಲಾವಾಡದ ವೃದ್ಧನ ಸಾವು

ಮೃತರ ಸಂಖ್ಯೆ 2ಕ್ಕೆ ಏರಿಕೆ?
ಆಡಳಿತ ವ್ಯವಸ್ಥೆಗೆ ‘ಧರ್ಮ ಸಂಕಟ’!

ಅಂಕೋಲಾ: ತೀವೃ ಉಸಿರಾಟದ ಸಮಸ್ಯೆಯಿಂದ ಮಂಗಳವಾರ ಸಂಜೆಯಷ್ಟೇ ಕಾರವಾರದ ಕ್ರಿಮ್ಸ್ ಗೆ ಸ್ವತಃ ಹೋಗಿ ದಾಖಲಾಗಿದ್ದ ಮುಲ್ಲಾವಾಡದ 75ರ ವೃದ್ಧರೋರ್ವರು ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಮೃತ ವ್ಯಕ್ತಿ ಮತ್ತು ಆತನ ಕುಟುಂಬಸ್ಥರು ಸೋಂಕಿನ ಲಕ್ಷಣಗಳನ್ನು ಮರೆಮಾಚಲು ಮುಂದಾಗಿದ್ದರೆ? ಎನ್ನುವ ಅನುಮಾನ ಕಾಡ ತೊಡಗಿದೆ. ©Copyright reserved by Vismaya tv ಮುಲ್ಲಾವಾಡದಲ್ಲಿ ಈ ಹಿಂದೆಯೇ 10ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ಆದರೂ ಕೆಲವರು ಸೋಂಕು ಲಕ್ಷಣಗಳನ್ನು ಮುಚ್ಚಿಡುತ್ತಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಗೆ ‘ಧರ್ಮ ಸಂಕಟ’ವಾದಂತಾಗಿದೆ.

ಈ ಮೊದಲೇ ಮಧುಮೇಹ ರೋಗದಿಂದ ಬಳಲುತ್ತಿದ್ದ ಎನ್ನಲಾದ ವೃದ್ಧ ವ್ಯಕ್ತಿ, ಶ್ವಾಸಕೋಶದ ಸೋಂಕಿನಿಂದ ತೀವೃ ಉಸಿರಾಟದ ಸಮಸ್ಯೆಗೊಳಪಟ್ಟು ಇನ್ನೊರ್ವನೊಂದಿಗೆ ಮಂಗಳವಾರ ಸಂಜೆ ಕಾರವಾರದ ಕ್ರಿಮ್ಸ್ ಗೆ ಚಿಕಿತ್ಸೆಗೊಳಪಡಲು ತೆರಳಿದ್ದ ವೇಳೆ ಆತನ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್-19 ಸೋಂಕು ದೃಢಪಟ್ಟಿತ್ತು ಎಂದು ಹೇಳಲಾಗಿದೆ. ©Copyright reserved by Vismaya tv ರೋಗಿಯನ್ನು ತೀವೃ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ತೀವೃ ಸೋಂಕಿನ ಲಕ್ಷಣಗಳಿಂದ ಕೂಡಿದ್ದ ರೋಗಿಯು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹೆಲ್ತ್ ಬುಲೆಟಿನ್‍ನಲ್ಲಿ ದೃಢಗೊಳಬೇಕಿದೆ. ಕಳೆದ ಕೆಲ ದಿನಗಳ ಹಿಂದೆ ಅಗಸೂರಿನ ವ್ಯಕ್ತಿಯೊರ್ವ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆತನಲ್ಲಿಯೂ ಸೋಂಕು ದೃಢಪಟ್ಟಿತ್ತು. ಈ ಮೂಲಕ ತಾಲೂಕಿನಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಮೃತ ವ್ಯಕ್ತಿ ಮತ್ತು ಕುಟುಂಬ ಸದಸ್ಯರ ಟ್ರಾವೆಲ್ ಹಿಸ್ಟರಿ, ಇವರು ಯಾರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು, ಇವರಿಂದ ಯಾರೆಲ್ಲಾ ಪ್ರಾಥಮಿಕ ಸಂಪರ್ಕಕ್ಕೆ ಬಂದಿರಬಹುದು ಎಂಬಿತ್ಯಾದಿ ವಿಷಯಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕಿದೆ. ಸೋಂಕು ಲಕ್ಷಣಗಳನ್ನು ಮರೆಮಾಚಲು ಹೋದರೆ ಮತ್ತಷ್ಟು ಅಪಾಯದ ಸಾಧ್ಯತೆಗಳಿವೆ ಎನ್ನುವುದು ವೈದ್ಯಕೀಯ ಪರಿಣಿತರ ಅಭಿಪ್ರಾಯವಾಗಿದ್ದು, ಸೋಂಕಿನ ಲಕ್ಷಣಗಳುಳ್ಳವರು ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದಿರುವವರು ಸ್ವತಃ ತಾವೇ ಬಂದು ಪರೀಕ್ಷೆಗೊಳಪಡುವ ಮೂಲಕ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version