Big News
Trending

ಹೊನ್ನಾವರದಲ್ಲಿಯೂ ಮೃತ ಸೋಂಕಿತನ ಅಂತ್ಯ ಸಂಸ್ಕಾರಕ್ಕೆ ಸಾರ್ವಜನಿಕರಿಂದ ಅಡ್ಡಿ

ಕಾನೂನು ಕ್ರಮದ ಎಚ್ಚರಿಕೆ
ಮುಂದೆನಿoತು ಅಂತ್ಯ ಸಂಸ್ಕಾರ ನೆರವೇರಿಸಿದ ತಾಲೂಕಾಡಳಿತ

[sliders_pack id=”2570″]

ಹೊನ್ನಾವರ –ಕೊರೊನಾ ಸೋಂಕಿನಿoದ ಮೃತಪಟ್ಟ ವ್ಯಕ್ತಿಯ ಅಂತ್ಯಸoಸ್ಕಾರಕ್ಕೆ ಸಾರ್ವಜನಿಕರು ಅಡ್ಡಿಪಡಿಸುವ ಆತಂಕಕಾರಿ ಘಟನೆ ತಾಲೂಕಿನಲ್ಲಿಯೂ ಮರುಕಳಿಸಿದೆ. ಕೊನೆಯಲ್ಲಿ ತಾಲೂಕಾಡಳಿತ ಕಾನೂನು ಕ್ರಮದ ಎಚ್ಚರಿಕೆ ನೀಡಿ ಅಂತ್ಯಸoಸ್ಕಾರ ನೆರವೇರಿಸಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಪಟ್ಟಣದ 78 ವರ್ಷದ ವ್ಯಕ್ತಿಗೆ ಕಾರವಾರದ ಕ್ರಿಮ್ಸ್ ಕೊರೊನಾ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದರು. ಶವವನ್ನು ಪಟ್ಟಣದ ಹೊರವಲಯದಲ್ಲಿರುವ ರಾಮತೀರ್ಥ ಗುಡ್ಡದಮೇಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದರು. ಆದರೆ ಸ್ಮಶಾನ ತಮ್ಮ ಸಮಾಜದ್ದು ಇಲ್ಲಿ ಕೊರೊನಾ ಸೋಂಕಿತನ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ತಗಾದೆ ತೆಗೆದರು ಎನ್ನಲಾಗಿದೆ.
ರಾಮತೀರ್ಥ ಗುಡ್ಡದಲ್ಲಿರುವ ಸ್ಮಶಾನವನ್ನು ಪಟ್ಟಣಪಂಚಾಯತ್ ನಿರ್ಮಿಸಿದ್ದೇ ಆಗಿದ್ದರೂ ಜನರೊಂದಿಗೆ ವಾಗ್ವಾದ ಬೇಡ ಎಂದು ಶವವನ್ನು ಬಂದರ್ ವ್ಯಾಪ್ತಿಯಲ್ಲಿರುವ ಸ್ಮಶಾನಕ್ಕೆ ತರಲಾಯಿತಾದರೂ ಅಲ್ಲಿಯೂ ಕೆಲ ವ್ಯಕ್ತಿಗಳು ಅಡ್ಡಿಪಡಿಸಲು ಮುಂದೆಬoದಾಗ ಶವದ ಅಂತ್ಯ ಸಂಸ್ಕಾರದಿoದ ರೋಗಾಣು ಹರಡುವುದಿಲ್ಲ. ಪೌರಕಾರ್ಮಿಕರು ಪಿ.ಪಿ.ಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ ಎಂದು ತಿಳಿಹೇಳಿ. ಒಪ್ಪದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಶವದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ತಹಶೀಲ್ದಾರ್ ವಿವೇಕ ಶೇಣ್ವಿ, ಪಿ.ಎಸ್.ಐ ಶಶಿಕುಮಾರ, ಪಟ್ಟಣಪಂಚಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಹಾಜರಿದ್ದರು.

ಸರ್ಕಾರದ ನಿರ್ದೇಶನದಂತೆ ಸ್ಥಳ ನಿರ್ಧರಿಸಿ ಸಂಪೂರ್ಣ ಸುರಕ್ಷತೆಯೊಂದಿಗೆ ಸ್ಮಶಾನದಲ್ಲಿಯೇ ಶವಸಂಸ್ಕಾರ ನಡೆಸುತ್ತೇವೆ. ಇನ್ನುಮುಂದೆ ಇಂತಹ ತಕರಾರು ನಡೆಸಿ ಅಡ್ಡಿಪಡಿಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು –ವಿವೇಕ ಶೇಣ್ವಿ, ತಹಶೀಲ್ದಾರ ಹೊನ್ನಾವರ

ಪೌರಕಾರ್ಮಿಕರು ಈಗಾಗಲೇ ಕ್ವಾರಂಟೈನ್‌ನಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸೆನಿಟೈಸೇಶನ್, ಸ್ವಚ್ಛತಾಕಾರ್ಯ ಎಂದು ಸಾಕಷ್ಟು ಶ್ರಮಪಡುತ್ತಿದ್ದಾರೆ, ಕೊರೊನಾ ವಾರಿಯರ್ಸ ರೀತಿಯಲ್ಲಿಕಾರ್ಯನಿರ್ವಹಿಸುವಾಗ ಅವರನ್ನು ಬೆಂಬಲಿಸದೆ ಸುಮ್ಮಸುಮ್ಮನೆ ಕಿರಿಕಿರಿ ಉಂಟುಮಾಡುವವರ ಮೇಲೆ ಕಾನೂನುಕ್ರಮ ಅನಿವಾರ್ಯವಾಗಲಿದೆ. -ನೀಲಕಂಠ ಮೇಸ್ತ, ಪ.ಪಂ.ಮುಖ್ಯಾಧಿಕಾರಿ

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button