Uttara Kannada
Trending

ಜಿಲ್ಲಾಧಿಕಾರಿಗಳಿoದ ಅಧಿಕಾರಿಗಳ ವಿಶೇಷ ಸಭೆ : ಪ್ರತಿಕಾಗೋಷ್ಠಿ

ಪಟ್ಟಣ ವ್ಯಾಪ್ತಿಯಲ್ಲಿ 13 ಕೇಸ್?: ಅಂಕೋಲಾದಲ್ಲಿ ಶತಕ ದಾಟಿದ ಸೋಂಕಿತರ ಸಂಖ್ಯೆ!
ಮುಲ್ಲಾವಾಡದಲ್ಲಿ ಮತ್ತೆ 8 ಪ್ರಕರಣ : ಓರ್ವನ ಮರಣ!
ಪುರಸಭೆಯ ಸ್ವಚ್ಛತಾ ಬಂಧುವಿಗೂ ವಕ್ಕರಿಸಿತೇ ಸೋಂಕಿನ ನಂಜು?

[sliders_pack id=”1487″]

ಅಂಕೋಲಾ : ಪಟ್ಟಣ ವ್ಯಾಪ್ತಿಯಲ್ಲಿ ಬುಧವಾರ 13ಕರೊನಾ ಕೇಸ್‌ಗಳು ದೃಢಪಡುವ ಮೂಲಕ ತಾಲೂಕಿನ ಒಟ್ಟು ಸೋಂಕಿತರ ಸಂಖ್ಯೆ ಶತಕದ ಗಡಿಯನ್ನು ದಾಟಿದಂತಾಗಿದೆ (109).ಈ ಕುರಿತು ನಾಳೆಯ ಹೆಲ್ತ್ ಬುಲೆಟಿನ್‌ನಲ್ಲಿ ದೃಢಗೊಳ್ಳುವ ಸಾಧ್ಯತೆ ಇದೆ.

ಮುಂದುವರೆದ ಸೋಂಕಿನ ಸರಪಳಿ:ಹುಲಿದೇವರವಾಡದ 21ರ ಯುವತಿ 22ರ ಯುವಕ 63ರ ವೃದ್ಧ 1ವರ್ಷದ ಬಾಲಕನಲ್ಲಿ ಸೋಂಕಿನ ಲಕ್ಷಣಗಳು ದೃಢಪಟ್ಟಿವೆ ಎನ್ನಲಾಗಿದೆ.©Copyright reserved by Vismaya tv ಪಟ್ಟಣ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿದ್ದ ಮುಲ್ಲಾವಾಡದಲ್ಲಿ ಸೋಂಕಿನ ಸರಪಣಿ ಮುಂದುವರೆದಿದ್ದು ಮತ್ತೇ 8ಜನರಲ್ಲಿ ಸೋಂಕು ದೃಢಪಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಯ ಸ್ವಚ್ಛತಾ ಬಂಧು ಓರ್ವರಲ್ಲಿಯೂ ಸೋಂಕು ಲಕ್ಷಣ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಇಂದು ಸೋಂಕಿನಿoದ ಗುಣಮುಖರಾದ 8ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಕುರಿತು ಹೆಲ್ತ್ ಬುಲೆಟಿನಲ್ಲಿ ದೃಢಗೊಳ್ಳಬೇಕಿದೆ.

ಮೃತರ ಸಂಖ್ಯೆ 2ಕ್ಕೆ ಏರಿಕೆ: ಮಂಗಳವಾರ ಕಾರವಾರದ ಕ್ರಿಮ್ಸ್ಗೆ ಸ್ವತಃ ತಾನೇ ಹೋಗಿ ದಾಖಲಾಗಿದ್ದ ಮುಲ್ಲಾವಾಡದ 75ರ ವೃದ್ಧ ಬುಧವಾರ ಬೆಳಿಗ್ಗೆ ಮೃತನಾಗಿದ್ದು, ಕ್ರಿಮ್ಸ್ನ ವಾರ್ಡಗೆ ದಾಖಲು ಮಾಡಿಕೊಳ್ಳುವ ಪೂರ್ವ ಗಂಟಲು ದ್ರವ ಪರೀಕ್ಷಿಸಿದಾಗ ಸೋಂಕು ದೃಢ ಪಟ್ಟಿತ್ತು. ಮಧುಮೇಹ ಖಾಯಿಲೆಯಿದ್ದ ವೃದ್ಧನಲ್ಲಿ ಶ್ವಾಸಕೋಶದ ಸೋಂಕಿನಿAದ ತೀವೃ ಉಸಿರಾಟದ ಸಮಸ್ಸೆಯಾಗಿ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎನ್ನಲಾಗಿದೆ. ಈ ಹಿಂದೆ ಅಗಸೂರಿನ ವ್ಯಕ್ತಿಯೊರ್ವ ಮಣಿಪಾಲದ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಆತನಲ್ಲಿಯು ಸೋಂಕು ದೃಢಪಟ್ಟಿತ್ತು. ಈ ಮೂಲಕ ತಾಲೂಕಿನ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಮುಲ್ಲಾವಾಡದ ಸೋಂಕಿನಾಟ-ಆಡಳಿತ ವರ್ಗಕ್ಕೆ ಧರ್ಮ ಸಂಕಟ: ದಿನದಿಂದ ದಿನಕ್ಕೆ ಮುಲ್ಲಾವಾಡದಲ್ಲಿ ಸೋಂಕಿನ ಆಟ ಮುಂದುವರೆಯುತ್ತಿದ್ದು ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ. ಸುಮಾರು 10 ಕೇಸ್‌ಗಳು ಈ ಹಿಂದೆಯೇ ದೃಢಗೊಂಡಿದ್ದರೂ, ಮೃತ ವ್ಯಕ್ತಿಗೂ ಆ ಸಮಯದಲ್ಲಿಯೇ ಸೋಂಕು ತಗುಲಿರಬಹುದೇ? ಸೋಂಕಿನ ಲಕ್ಷಣಗಳು ಗೊತ್ತಿದ್ದೂ ಮರೆಮಾಚುವ ಯತ್ನ ನಡೆಯಿತೇ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.©Copyright reserved by Vismaya tvಒಂದೊಮ್ಮೆ ಸೋಂಕು ಲಕ್ಷಣಗಳು ಕಂಡು ಬಂದಿದ್ದರೂ ಕುಟುಂಬ ವರ್ಗವೇ ಅದನ್ನು ಮರೆಮಾಚುವ ಪ್ರಯತ್ನ ನಡೆಸಿತ್ತೇ ಎನ್ನಲಾಗಿದೆ. ಇದೆ ಕುಟುಂಬ ವರ್ಗದವರು ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ ಹಾಲು ಮತ್ತು ಮೊಟ್ಟೆಯ ವ್ಯಾಪಾರ ನಡೆಸುತ್ತಾರೆ ಎನ್ನಲಾಗಿದ್ದು ಕೆಲ ಗ್ರಾಹಕರು ಸಹ ಆತಂಕಪಡುವAತಾಗಿದೆ. ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿರುವ ತಾಲೂಕಾಡಳಿತ ಮತ್ತು ಆರೋಗ್ಯ ಸಿಬ್ಬಂದಿಗಳ ಪಾಲಿಗೆ ತಮಗರಿವಾಗದಂತೆ ನಡೆದ ಈ ಘಟನೆ ‘ಧರ್ಮ ಸಂಕಟ’ವಾದoತಿದೆ

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಾಲೂಕಿನ ವಿವಿಧ ಅಧಿಕಾರಿಗಳ ಸಭೆ ಕರೆದು ಸೋಂಕು ನಿಯಂತ್ರಣಕ್ಕೆ ಈವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ, ಮುಂದೆ ತೆಗೆದುಕೊಳ್ಳಬೇಕಾದ ಜಾಗ್ರತಿಗಳ ಬಗ್ಗೆ ಚರ್ಚಿಸಿ, ಅಗತ್ಯ ನಿರ್ದೇಶನ ನೀಡಿದ್ದಾರೆಎನ್ನಲಾಗಿದೆ.ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ, ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಸೋಂಕು ಲಕ್ಷಣಗಳು ಕಂಡುಬoದವರು ಅದನ್ನು ಮುಚ್ಚಿಡುವ ಪ್ರಯತ್ನ ಮಾಡಬಾರದು ಅದರಿಂದ ಅವರ ಕುಟುಂಬಸ್ಥರಿಗೆ ಮತ್ತು ಪ್ರಾಥಮಿಕ ಸಂಪರ್ಕಕ್ಕೆ ಬಂದವರಿಗೇ ತೊಂದರೆ ಮತ್ತು ಅಪಾಯದ ಸಾಧ್ಯತೆಗಳು ಹೆಚ್ಚಿದೆ. ಶವ ಸಂಸ್ಕಾರ ಮತ್ತಿತರ ಕಾರಣಗಳಿಂದ ವ್ಯವಸ್ಥೆಯನ್ನು ವಿರೋಧಿಸುವ ಬದಲು ಪ್ರಜ್ಞಾವಂತರ ಜಿಲ್ಲೆಯ ಜನರು ಸಹಕರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.©Copyright reserved by Vismaya tv

ಈ ಸಂದರ್ಭದಲ್ಲಿ ಕುಮಟಾ ಉಪವಿಭಾಗಾಧಿಕಾರಿಗಳಾದ ಅಜೀತ ಎಂ.,ತಹಶೀಲ್ದಾರರಾದ ಮೇಘರಾಜ ನಾಯ್ಕ ಕುಮಟಾ,ಉದಯ ಕುಂಬಾರ ಅಂಕೋಲಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

[sliders_pack id=”2570″]

Back to top button