ಅಂಕೋಲಾ: ಗಂಗಾವಳಿ ನದಿಯಲ್ಲಿ ಮೀನು ಹಿಡಿಯಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಯುವಕ ಮನೆಗೆ ಮರಳದೇ ಕಾಣೆಯಾದ ಘಟನೆ ಅಂಕೋಳಾ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವರೆಯಲ್ಲಿ ನಡೆದಿತ್ತು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಎರಡು ದಿನಗಳ ಬಳಿಕ ಯುವಕ ನದಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಿರಾಣಿ ಹೋಲ್ ಸೇಲ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: ಸುಟ್ಟು ಕರಕಲಾದ ಸಾಮಾನುಗಳು
ಉಳುವರೆ ನಿವಾಸಿ ರಾಮಚಂದ್ರ ಹೊನ್ನಾ ಗೌಡ (30) ಮೃತ ದುರ್ದೈವಿಯಾಗಿದ್ದು ಈತ ರವಿವಾರ ಸಂಜೆ ಮನೆ ಸಮೀಪದ ಗಂಗಾವಳಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಹೋಗಿದ್ದವ ಮನೆಗೆ ಮರಳಿ ಬಂದಿರಲಿಲ್ಲ ಎನ್ನಲಾಗಿದೆ ಕುಟುಂಬಸ್ಥರು,
ಊರವರು ಸೇರಿ ನದಿ ತೀರದಲ್ಲಿ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗದ ಕಾರಣ ಆತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ರಾಮಚಂದ್ರ ಗೌಡ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಸೋಮವಾರ ಆತನ ಶೋಧ ಕಾರ್ಯಕ್ಕೆ ಮುಂದಾಗಿದ್ದರಾದರೂ ಪತ್ತೆ ಕಾರ್ಯ ಸಾಧ್ಯವಾಗಿರಲಿಲ್ಲ.
ಮಂಗಳವಾರ ಬೆಳಿಗ್ಗೆ ಹೊಸೂರು ಬ್ರಿಜ್ ಸಮೀಪ ಗಂಗಾವಳಿ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ರಾ.ಹೆ 66 ರ ಶಿರೂರು ಹತ್ತಿರ ಮೃತದೇಹ ನದಿದಡಕ್ಕೆ ಬಂದು ಅಪ್ಪಳಿಸಿದೆ. ಐಎಸ್ ಐ. ಗೀತಾ ಸಿರ್ಸಿಕರ ಮತ್ತು 112 ತುರ್ತು ವಾಹನ ಸಿಬ್ಬಂದಿಗಳು, ಪೋಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ನೆರವಾದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ