ಮಕ್ಕಳಿಗೆ ಕೌಶಲ್ಯಪೂರ್ಣ ಶಿಕ್ಷಣ ನೀಡಲು ಹೊಸ ಶಿಕ್ಷಣ ನೀತಿ ಅನುಕೂಲ; ಕಾಗೇರಿ

ಶಿರಸಿ:ಮಕ್ಕಳಿಗೆ ಕೌಶಲ್ಯಪೂರ್ಣ ಶಿಕ್ಷಣ ನೀಡಲು ಹೊಸ ಶಿಕ್ಷಣ ನೀತಿ ಅನುಕೂಲವಾಗಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ತಾಲೂಕಿನ ಗಜಾನನ ಪ್ರೌಢಶಾಲೆ ಹೆಗಡೆ ಕಟ್ಟಾ ದ ಸುವರ್ಣ ಮಹೋತ್ಸವ ವರ್ಷಾಚರಣೆ ಮತ್ತು ನೂತನ ಸುವರ್ಣ ಸುರಭಿ ಸಭಾಭವನ ವನ್ನು ಉದ್ಘಾಟಿಸಿ ಮಾತನಾಡಿದರು.

ಹಲವರ ಪರಿಶ್ರಮದಿಂದ ಹೆಗಡೆ ಕಟ್ಟಾ ಪ್ರೌಢಶಾಲೆ ಸ್ವತಂತ್ರ ಫ್ರೌಡಶಾಲೆಯಾಗಿ ಹೆಮ್ಮರವಾಗಿ ಬೆಳೆದಿದೆ.
ಈ ಶಾಲೆಯ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ.
ಪೂರ್ವಜರ ಪರಿಶ್ರಮ ದಿಂದ ಇಂದು ಸುವರ್ಣ ಮಹೋತ್ಸವ ವನ್ನು ಶಾಲೆ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ.

ದೇಶದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚುತ್ತಿದೆ.ಜನರಲ್ಲಿ ಶಿಕ್ಷಣ ದ ಮಹತ್ವ ದ ಅರಿವಾಗಿದೆ.ಆದರೆನೈತಿಕ ಜವಾಬ್ದಾರಿ ಗಳು ,ಮೌಲ್ಯಗಳಲ್ಲಿ ಕುಸಿತವನ್ನೂ ಕಾಣುತ್ತಿದ್ದೇವೆ.ಜಾತಿ, ಧರ್ಮ, ಭಾಷೆ ಸಂಸ್ಕೃತಿಯ ವಿಚಾರದಲ್ಲಿ ಗೊಂದಲಗಳು ನಡೆಯುತ್ತಿದೆ.ಭ್ರಷ್ಟಾಚಾರ ಗಳೂ ಹೆಚ್ಚುತ್ತಿದೆ.

ವೃದ್ಧಾಶ್ರಮ ಗಳು ಬೇಕು ಎನ್ನುವ ಬೇಡಿಕೆ ಗಳು ಹಳ್ಳಿಗಳಿಂದಲೂ ಬರುತ್ತಿದೆ. ದುಶ್ಚಟಗಳಿಗೆ ಯುವಕರು ದಾಸರಾಗುತ್ತಿದ್ದಾರೆ.ಶಿಕ್ಷಣ ಪಡೆದ ಮಕ್ಕಳು ಜವಾಬ್ದಾರಿ ಯುತ ಪ್ರಜೆಯಾಗ ಬೇಕು.ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಯೋಚಿಸಬೇಕಿದೆ.

ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಊರಿನ ಮಕ್ಕಳು ಊರಿನಲ್ಲೆ ಇರುವಂತೆ ಮಾಡಬೇಕಾದ ಅವಶ್ಯಕತೆ ಸಾಕಷ್ಟಿದೆ.ಹಣ ಗಳಿಸುವುದೇ ಜೀವನ ವಾಗಬಾರದು. ಸಮಾಜಕ್ಕೆ ಹೊಸತನದ ಕೊಡುಗೆ ನೀಡುವುದು ಜೀವನ ವಾಗಬೇಕು ಎಂದರು.
ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ವ್ಯವಸ್ಥೆ ಯಲ್ಲಿ ಬದಲಾವಣೆ ಯಾಗುತ್ತದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರು ಅಧ್ಯಯನ ಮಾಡಬೇಕು.

ಕೌಶಲ್ಯ ಪೂರ್ಣ ಶಿಕ್ಷಣ 6ನೇ ತರಗತಿಯಿಂದಲೆ ಮಕ್ಕಳಿಗೆ ಹೊಸ ಶಿಕ್ಷಣ ನೀತಿಯಿಂದ ಸಿಗುತ್ತದೆ.
ನಿರುದ್ಯೋಗ ಸಮಸ್ಯೆ ನಿವಾರಣೆ ಯಾಗುತ್ತದೆ.
ಮುಂದಿನ ಭವಿಷ್ಯ ಕ್ಕಾಗಿ ಹೊಸ ಶಿಕ್ಷಣ ನೀತಿ ಅನಿವಾರ್ಯ ವಾಗಿದೆ. ಶಿಕ್ಷಣದಿಂದ ಕೌಶಲ್ಯತೆ ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಕ್ರೀಡೆ ಹಾಗೂ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಆರ್ ಡಿ ಹೆಗಡೆ , ಹೆಗಡೆಕಟ್ಟಾ ಗ್ರಾ ಪಂ ಅಧ್ಯಕ್ಷೆ ವೀಣಾ ಭಟ್ , ಗಜಾನನ ಸೆಕೆಂಡರಿ ಸ್ಕೂಲ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎಂ,ಆರ್ ಹೆಗಡೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಪಿ ಹೆಗಡೆ, ಹೆಗಡೆ ಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂಪಿ ಹೆಗಡೆ,ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ವನಿತಾ ಹೆಗಡೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ದ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಜಾಗಿರದಾರ,ಶಾಲಾ ಮುಖ್ಯ ಶಿಕ್ಷಕ ಶೈಲೆಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶಿರಸಿ

Exit mobile version