Focus News
Trending

ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ

ಸಿದ್ದಾಪುರ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ನಿಲ್ಕುಂದ ಸಮೀಪದ ಠಾಣ್ಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆಯಿಂದ ವಿವಿಧ ಪೂಜೆಗಳು ನಡೆದು ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಗಣ ಹವನ, ಸತ್ಯನಾರಾಯಣ ಪೂಜೆ, ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಅನ್ನಪೂರ್ಣೇಶ್ವರಿ ಪೂಜೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ವಿವಿಧ ಹೋಮ ಹವನ ಪೂಜೆಗಳಲ್ಲಿ ಭಕ್ತರು ಭಾಗವಹಿಸಿ ಹಣ್ಣುಕಾಯಿ ಸೇವೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು ಸಂಜೆ ವೇಳೆ ಇರುಮುಡಿ ಕಟ್ಟುವುದು, ತುಪ್ಪದ ಕಾಯಿ ತುಂಬುವ ಕಾರ್ಯಕ್ರಮ ನಡೆಯಿತು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖಂಡ ಸಿದ್ದಾಪುರ

Related Articles

Back to top button