Follow Us On

Google News
Focus News
Trending

ಭಾರತೀಯ ಕಿಸಾನ್ ಸಂಘ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದಿಂದ ಪ್ರತ್ಯೇಕ ಮನವಿ

ಶಿರಕುಳಿ, ಕೃಷ್ಣಾಪುರ, ಬಾಳೆಗುಳಿ, ಬೊಗ್ರಿಬೈಲ್ ನಾಗರಿಕರಿಂದಲೂ ಮನವಿ.
ಅಂಕೋಲಾದಲ್ಲಿ ಮನವಿ ಸ್ವೀಕರಿಸಿದ ತಹಶೀಲ್ದಾರ ಉದಯ ಕುಂಬಾರ.

[sliders_pack id=”1487″]

ಅಂಕೋಲಾ : ಭಾರತೀಯ ಕಿಸಾನ್ ಸಂಘದ ತಾಲೂಕು ಸಮಿತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್‍ನ ತಾಲೂಕು ಸಮಿತಿ, ಶಿರಕುಳಿ-ಕೃಷ್ಣಾಪುರ-ಬಾಳೆಗುಳಿಯ ಸಾರ್ವಜನಿಕರು ತಮ್ಮ ನಾನಾ ಬೇಡಿಕೆಗಳ ಈಡೇರಿಕೆಗಳಿಗಾಗಿ ಒತ್ತಾಯಿಸಿ ಬುಧವಾರ ತಹಶೀಲ್ದಾರರವರಿಗೆ ಪ್ರತ್ಯೇಕ ಪ್ರತ್ಯೇಕ ಮನವಿ ನೀಡಿದರು. ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ (ರಿ.): ತಾಲೂಕಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಗಾಂವಕರ, ಜಿಲ್ಲಾ ಕಾರ್ಯದರ್ಶಿ ಭಾ.ನಾ. ಮಾಧವ ಮನವಿ ಅರ್ಪಿಸಿದರು.

ಮನವಿಯಲ್ಲಿ ತಿಳಿಸಿದಂತೆ ರಾಜ್ಯ ಸರ್ಕಾರ 1961ರ ಭೂ-ಸುಧಾರಣಾ ಕಾಯ್ದೆಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿರುವುದನ್ನು ಸಂಘವು ತೀವ್ರವಾಗಿ ವಿರೋಧಿಸುತ್ತದೆ. ತಿದ್ದುಪಡಿ ಕಾಯ್ದೆಯಿಂದ ರಾಜ್ಯದ ಕೃಷಿಕರನ್ನು ಬೀದಿಪಾಲು ಮಾಡುವ, ಉಳ್ಳವರು ಕೃಷಿ ಜಮೀನು ಖರೀದಿಸಿ ತಮ್ಮಿಚ್ಛೆಗೆ ತಕ್ಕಂತೆ ಬಳಸುವ ಅಧಿಕಾರ ನೀಡಿದೆ. ಕರೊನಾ ಮಾರಿ ಮಾನವತೆಯನ್ನು ಪೀಡಿಸುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕತೆ ನೆಲ ಕಚ್ಚಿದ್ದು ರೈತರು ಮತ್ತು ಕೃಷಿ ಅವಲಂಬಿತ ಕುಟುಂಬ ಅಪಾರ ಸಂಕಷ್ಟದಲ್ಲಿದೆ ಈ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವ ಬದಲು, ತಮ್ಮ ಕೃಷಿ ಭೂಮಿಯನ್ನು ರೈತರು ಮಾರಿಕೊಂಡು ಗುಳೆ ಎದ್ದು ಹೋಗಲು ಸರ್ಕಾರವೇ ಉತ್ತೇಜನ ನೀಡುತ್ತಿದೆ. ಒಟ್ಟಾರೆಯಾಗಿ ರೈತ ವಿರೋಧಿ ಸರ್ಕಾರದ ಕ್ರಮವನ್ನು ಸಂಘವು ತೀವ್ರವಾಗಿ ವಿರೋಧಿಸಿ,ಕೂಡಲೇ ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್‍ನ (ರಿ): ತಾಲೂಕಾ ಸಮಿತಿಯ ಅಧ್ಯಕ್ಷ ನಾಗೇಶ ಗೌಡ, ಕಾರ್ಯದರ್ಶಿ ರಾಜು ಗೌಡ ಪದಾಧಿಕಾರಿಗಳಾದ ಉದಯ ನಾಯ್ಕ, ಬೊಮ್ಮಯ್ಯ ನಾಯ್ಕ, ನಾಗಪ್ಪ ನಾಯ್ಕ, ಸಂತೋಷ ನಾಯ್ಕ ಮತ್ತಿತರರು ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರರವರಿಗೆ, ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಿಗೆ ತಲುಪಿಸುವಂತೆ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಪರಿಹಾರದ ಅವಧಿ ವಿಸ್ತರಣೆ, ಹೆಚ್ಚುವರಿ ಕೋವಿಡ್ ಪರಿಹಾರ ಮದುವೆ-ಪಿಂಚಣಿ-ಮರಣ, ಪರಿಹಾರ ಅವಧಿ ವಿಸ್ತರಣೆ ಸೇವಾಸಿಂಧು ಕೇಂದ್ರ ಮತ್ತು ಕಾರ್ಮಿಕ ಇಲಾಖೆಯಲ್ಲಿ ಲಂಚಗುಳಿತನಕ್ಕೆ ಕಡಿವಾಣ ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿರಕುಳಿ, ಕೃಷ್ಣಾಪುರ, ಬೊಗ್ರಿಬೈಲ್,ಬಾಳೆಗಳಿ ಸಾರ್ವಜನಿಕರ ಪರವಾಗಿ:ಗೋವಿಂದ ಗೌಡ, ಶ್ರೀನಿವಾಸ ನಾಯ್ಕ, ಲಕ್ಷ್ಮಣ ನಾಯ್ಕ, ಶಾಂತರಾಮ ಹುಲಸ್ವಾರ್, ಸಂತೋಷ ನಾಯ್ಕ, ಮಂಜುನಾಥ ನಾಯಕ, ರಾಮಕೃಷ್ಣ ನಾಯ್ಕ ಮತ್ತಿತರರು ಪ್ರತ್ಯೇಕ ಮನವಿ ನೀಡಿದರು.

ಶಿರಕುಳಿ ಕೃಷ್ಣಾಪುರದ ಸರ್ವೇ ನಂ. 269ರ ಲಗ್ತ ಸ್ಥಳದಲ್ಲಿ, ಜುಲೈ 29ರಂದು ಊರ ನಾಗರಿಕರ ಗಮನಕ್ಕೆ ತರದೆ ಕರೊನಾ ರೋಗಿಯೊಬ್ಬರ ಮೃತ ದೇಹ ದಪನ್ ಮಾಡಿದ್ದು, ಈ ಮೊದಲು ಈ ಸ್ಥಳವು ರುದ್ರ ಭೂಮಿಯಾಗಿರದೆ ಪ್ರಾರ್ಥನಾ ಸ್ಥಳವಾಗಿತ್ತು. ಈ ಸ್ಥಳದ ಸುತ್ತ-ಮುತ್ತಲೂ ಅಂಗನವಾಡಿ, ಶಾಲೆ,ದೇವರಗುಡಿ, ಮತ್ತು ಜನ ವಸತಿ ಇರುವುದರಿಂದ ಸ್ಥಳೀಯ ನಾಗರೀಕರಿಗೆ ಅಸಮಾಧಾನವಾಗಿದೆ. ಆದ್ದರಿಂದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಇನ್ಮುಂದೆ ಇಲ್ಲಿ ಯಾವುದೇ ಮೃತ ದೇಹವನ್ನು ದಪನ್ ಮಾಡಲು ಅವಕಾಶ ನೀಡಬಾರದೆಂದು ತಹಶೀಲ್ದಾರರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿವಿಧ ಸಂಘಟನೆ ಮತ್ತು ಸಾರ್ವಜನಿಕರ ಮನವಿ ಅರ್ಜಿಗಳನ್ನು ಸ್ವೀಕರಿಸಿದ ತಹಶೀಲ್ದಾರ ಉದಯ ಕುಂಬಾರ, ತಮ್ಮೆಲ್ಲರ ಮನವಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button