ಕುಮಟಾ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಸೈನ್ಸ್ ಸೆಂಟರ್ ಕಾರವಾರದಲ್ಲಿ ನಡೆದ 30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ-2022ರ ಉಪವಿಷಯದಲ್ಲಿ ಕಾಲಿನಿಂದ ಒತ್ತುವ ನಲ್ಲಿ ಎನ್ನುವ ಯೋಜನೆಯನ್ನು ಮಂಡಿಸಿ ಗ್ರಾಮೀಣ ಹಿರಿಯರ ವಿಭಾಗದಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿ ಸಾನಿಕಾ ಜಟ್ಟಿ ನಾಯ್ಕ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಕ ಶಿಕ್ಷಕರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಮತ್ತು ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಎಸ್ ಗಾಂವಕರ, ಶಿಕ್ಷಕ ವೃಂದದವರು, ಡಿ.ಡಿ.ಪಿ.ಐ ಉತ್ತರಕನ್ನಡ, ಶ್ರೀ ಎನ್ ಜಿ ನಾಯಕ ಡಯಟ್ ಪ್ರಾಂಶುಪಾಲರು, ಶ್ರೀ ಆರ್.ಎಲ್.ಭಟ್ಟ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ, ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರತ್ನ ಗಾಂವಕರ ಹಾಗೂ ಸದಸ್ಯರು, ಊರಿನ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ