ಕಾರವಾರ: ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಮೋಜು ಮಸ್ತಿಗೆಂದು ಸಮುದ್ರಕ್ಕೆ ಇಳಿಯುತ್ತಿದ್ದು, ಈ ವೇಳೆ ಅಪಾಯಕ್ಕೆ ಸಿಲುಕುತ್ತಿರುವ ಘಟನೆ ಹೆಚ್ಚುತ್ತಿದೆ. ಹೌದು, ಎರಡು ಪ್ರತ್ಯೇಕ ಘಟನೆಯಲ್ಲಿ ಪ್ರವಾಸಕ್ಕೆ ಬಂದು ಸಮುದ್ರಪಾಲಾಗಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ಮುರುಡೇಶ್ವರ ಹಾಗೂ ಗೋಕರ್ಣ ದಲ್ಲಿ ನಡೆದಿದೆ. ಗೋಕರ್ಣಕ್ಕೆ ಆಗಮಿಸಿದ್ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಮಾರುತಿ (20) ಚಂದನ(16), ಮಧುಸೂದನ (11) ಎಂಬುವವರು ಈಜಾಡುವಾಗ ಸುಳಿಗೆ ಸಿಲುಕಿ ಕೊಚ್ಚಿಹೋಗುತ್ತಿದ್ದರು. ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ಪ್ರವಾಸಿಗರ ಜೀವ ರಕ್ಷಣೆ ಮಾಡಿದ್ದಾರೆ.
ಇನ್ನೊಂದೆಡೆ, ಮುರುಡೇಶ್ವರದಲ್ಲಿ ಇಂತಹದೇ ಘಟನೆ ನಡೆದಿದ್ದು, ಕೋಲಾರದಿಂದ 8 ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ 19 ವರ್ಷದ ಓರ್ವ ಪ್ರವಾಸಿಗರ ಅಲೆಗೆ ಸಿಲುಕಿ, ಒದ್ದಾಡುತ್ತಿದ್ದ. ಈ ವೇಳೆ ಲೈಫ್ ಗಾರ್ಡ್ಗಳಾದ ಪ್ರವೀಣ, ಹನುಮಂತ, ವಿಘ್ನೇಶ್, ಶೇಖರ್ ಎಂಬುವವರು ರಕ್ಷಣೆ ಮಾಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ