ಅಂಕೋಲಾ: ರಾ.ಹೆ 63 ರ ಸುಂಕಸಾಳ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೋಲ್ ತುಂಬಿದ ಲಾರಿ ಹಾಗೂ ಖರ್ಜೂರ ತುಂಬಿದ ಲಾರಿಗಳೆರಡೂ ಪಲ್ಟಿಯಾಗಿ ಹೆದ್ದಾರಿ ಸಂಚಾರಕ್ಕೆ ತೀವ್ರ ವ್ಯತ್ಯವಾಗಿತ್ರು.ಅಂಕೋಲಾ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಕೊಪ್ಪಳ ಕಡೆ ಕೊಲ್ (ಕಲ್ಲಿದ್ದಲ್ಲು ) ಸಾಗಿಸುತ್ತಿದ್ದ ಲಾರಿ ವಿದ್ಯುತ್ತ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡು ಲಾರಿಯ ಮಧ್ಯೆ ಸಿಲುಕಿದ್ದ ಚಾಲಕನನ್ನು ಅತೀವ ಪ್ರಯಾಸ ಪಟ್ಟು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.
ಮುಂಬಯಿಯಿಂದ ಅಂಕೋಲಾ ಮಾರ್ಗವಾಗಿ ಕೋಚಿನ್ ಕಡೆಗೆ ಒಣ ಕರ್ಜೂರ ಸಾಗಿಸುತ್ತಿದ್ದ ಈಚರ್ ಮಾದರಿಯ ಇನ್ನೊಂದು ಲಾರಿ ಹೆದ್ದಾರಿಯ ಇನ್ನೊಂದು ಮಗ್ಗುಲಿಗೆ ಮಗುಚಿ ಬಿದ್ದು ಖರ್ಜೂರದ ಬಾಕ್ಸ್ ಚೆಲ್ಲಾ ಪಿಲ್ಲಿಯಾಗಿದೆ. ಹೆದ್ದಾರಿ ಗಸ್ತು ವಾಹನ , ಅಂಕೋಲಾ ಪೋಲೀಸರು ಸ್ಥಳಕ್ಕೆ ಪರಿಶೀಲಿಸಿ, ಹೆದ್ದಾರಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು.. ಎರಡು ಕ್ರೇನ್ ಬಳಸಿ ಪಲ್ಟಿಯಾದ ವಾಹನಗಳನ್ನು ಮೇಲೆತ್ತಿ ಹೆದ್ದಾರಿ ಅಂಚಿಗೆ ಸರಿಸಲಾಯಿತು. ಪಿ ಎಸೈ ಗಳಾದ ಪ್ರವೀಣ ಕುಮಾರ, ಪ್ರೇಮನಗೌಡ ಪಾಟಿಲ್ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಸಿಪಿಐ ಸಂತೋಷ ಶೆಟ್ಟಿ ಸ್ಥಳ ಪರಿಶೀಲಿಸಿದರು.
ಅಪಘಾತ ಗೊಂಡ ವಾಹನಗಳನ್ನು ಪಕ್ಕಕ್ಕೆ ಸರಿಸಿದರೂ ಹೆದ್ದಾರಿಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಕೋಲ್ ಮತ್ತು ಖರ್ಜೂರದಿಂದ ಮತ್ತೆ ಕೆಲ ಕಾಲ ಸಂಚಾರಕ್ಕೆ ತೊಡಕೆನಿಸಿತು. ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ