6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಅನುಕೂಲಕ್ಕೆ ವಾಟ್ಸಪ್ ಮತ್ತು ಗೂಗಲ್ ಮೀಟ್ ವೇದಿಕೆ
ಅಂಕೋಲಾ: ಬೆಂಗಳೂರಿನ ಅಗಸ್ತ್ಯ ಅಂತರ್‌ರಾಷ್ಟ್ರಿಯ ಪ್ರತಿಷ್ಠಾನದವರು ಮಕ್ಕಳಲ್ಲಿ ಮೂಲಭೂತ ವಿಜ್ಞಾನದ ಆಸಕ್ತಿ ಕೆರಳಿಸಲು ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸುತ್ತಾ ಬಂದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಭೀತಿಯಿಂದಾಗಿ ಶಾಲಾ ತರಗತಿಗಳು ಆರಂಭವಾಗದೇ ವಿದ್ಯಾರ್ಥಿಗಳೆಲ್ಲರೂ ಮನೆಯಲ್ಲಿಯೇ ಕುಳಿತು ಪಾಠ ಕಲಿಯುವಂತಾಗಿದೆ.©Copyright reserved by Vismaya tv 6 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಟ್ಸಪ್ ಮತ್ತು ಗೂಗಲ್ ಮೀಟ್ ವೇದಿಕೆಯನ್ನು ಬಳಸಿಕೊಂಡು ಪಠ್ಯ ಕ್ರಮಕ್ಕನುಗುಣವಾಗಿ ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳನ್ನು, ಉಚಿತವಾಗಿ ನಡೆಸುತ್ತಿದೆ.
ವಿವಿಧ ಶಾಲೆಯ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಿದ್ದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸದುಪಯೋಗ ಪಡೆದುಕೊಳ್ಳುವಂತೆ ಮಾಧ್ಯಮ ಪ್ರಕಟಣೆ ಮೂಲಕ ಕೋರಿಕೊಳ್ಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ಪಾಲಕರು,ಶಿಕ್ಷಕರು ಹೆಚ್ಚಿನ ಮಾಹಿತಿಗಾಗಿ ಅಗಸ್ತ್ಯ ಪೌಂಡೇಶನ್‌ನ ಬಿಲಾಲ್(9482456726), ಶಿವರಾಜ(8618028517) ರವರನ್ನು ಸಂಪರ್ಕಿಸಬುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.