Follow Us On

WhatsApp Group
Important
Trending

ಮುಗ್ವಾದ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಲೋಕಾರ್ಪಣೆ : ಫೆಬ್ರವರಿ 3 ರಿಂದ 6 ರವರೆಗೆ ಕಾರ್ಯಕ್ರಮ

ಶ್ರೀದೇವರಿಗೆ ಸಮರ್ಪಣೆಯಾಗಲಿದೆ ರಜತ ಪಲ್ಲಕ್ಕಿ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ನಾಗಕ್ಷೇತ್ರವಾದ ಶ್ರೀಕ್ಷೇತ್ರ ಮುಗ್ವಾದ ಸುಬ್ರಹ್ಮಣ್ಯ ದೇವಾಲಯದಲ್ಲಿ ಫೆಬ್ರವರಿ 3 ರಿಂದ 6 ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿವೆ. ಇದೆ ಸಂದರ್ಭದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಮತ್ತು ರಜತ ಪಲ್ಲಕ್ಕಿ ಸಮರ್ಪಣೆ ಹಾಗೂ ರಜತ ಕಲಶ ಪ್ರತಿಷ್ಠೆ ಸೇರಿದಂತೆ ಮುಂತಾದ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಆಡಳಿತ ಕಮಿಟಿಯ ಅಧ್ಯಕ್ಷ ಎಸ್ ಆರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು,

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಆರ್.ಹೆಗಡೆ ಮಾತನಾಡಿ ದಕ್ಷಿಣ ನಾಸಿಕ ಕ್ಷೇತ್ರ ಎನ್ನುವ ಹಿರಿಮೆ ಹೊಂದಿರುವ ಮುಗ್ವಾ ಸುಬ್ರಹ್ಮಣ್ಯ ದೇವರಿಗೆ ನೂತನವಾಗಿ ನಿರ್ಮಾಣವಾದ ಮಹದ್ವಾರ, ರಾಜಗೋಪುರ, ಸುವರ್ಣ ಕವಚ ಮತ್ತು ರಜತ ಪಲ್ಲಕ್ಕಿ ಸಮರ್ಪಣೆ, ರಜತ ಕಲಶ ಪ್ರತಿಷ್ಠೆ ಫೆಬ್ರವರಿ 3 ರಿಂದ 6 ರವರೆಗೆ ಜರುಗಲಿದೆ. ಫೆಬ್ರವರಿ 3 ರಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಜಿಯವರನ್ನು ಬಾಳೆಗೆದ್ದೆ ಹಾಲಕ್ಕಿ ಸಮುದಾಯದ ಸಂಪ್ರದಾಯಿಕ ಕುಣಿತದೋಂದಿಗೆ ಮೇರವಣಿಗೆಯ ಮೂಲಕ ಸ್ವಾಗತಿಸಲಾಗುವುದು ನಂತರ ಸ್ವಾಮೀಜಿಯವರ ಅಮೃತ ಹಸ್ತದಿಂದ ‘ಮಹಾ ದ್ವಾರ’ ಉದ್ಘಾಟನೆಯಾಗಲಿದೆ.

4 ರಂದು ಶನಿವಾರ ಬೆಳಿಗ್ಗೆ ಗಂಟೆಗೆ ವಿವಿಧಧಾರ್ಮಿಕ ಕಾರ್ಯಕ್ರಮಗಳೊಂದಿಗೆ 11 ಗಂಟೆಗೆ ಶ್ರೀಗಣಪತಿ ಮತ್ತು ಸುಬ್ರಹ್ಮಣ್ಯ ದೇವರಿಗೆ ಸುವರ್ಣಕವಚ ಸಮರ್ಪಣೆ ಮತ್ತು ರಜತ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ ಮಧ್ಯಾಹ್ನ 3ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್.ಎಮ್.ಭಟ್, ಎಸ್.ಜಿ.ಹೆಗಡೆ, ನಾರಾಯಣ ಹೆಗಡೆ, ಎಸ್.ಆರ್. ಭಟ್, ಜಿ.ಎಸ್.ಭಟ್, ಲಕ್ಷ್ಮೀನಾರಾಯಣ ಹೆಗಡೆ, ಕೃಷ್ಣಮೂರ್ತಿ ಹೆಗಡೆ, ಸತ್ಯನಾರಾಯಣ ಹೆಗಡೆ, ಕೆ.ವಿ.ಹೆಗಡೆ, ಎಸ್.ವಿ.ಭಟ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button