Follow Us On

WhatsApp Group
Focus News
Trending

ಆರೋಗ್ಯದಲ್ಲಿ ಆಕಸ್ಮಿಕ ಏರುಪೇರು: ಲಕ್ಷ್ಮೇಶ್ವರದ ರವೀಂದ್ರ ಮುರಾರಿ ನಾಯ್ಕ ವಿಧಿವಶ

ಅಂಕೋಲಾ :  ಪುರಸಭೆ ವ್ಯಾಪ್ತಿಯ ಲಕ್ಷ್ಮೇಶ್ವರ – ಕುಂಬಾರಕೇರಿ ನಿವಾಸಿ ರವೀಂದ್ರ ಮುರಾರಿ ನಾಯ್ಕ (61 ), ಸೆ 18 ರ ಬುಧವಾರ ಸಾಯಂಕಾಲ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕೋಮಾರಪಂತ ಸಮಾಜದ ಹಕ್ಕುದಾರರ ಮನೆತನದವರಾಗಿದ್ದ ರವೀಂದ್ರ ನಾಯ್ಕ,ಈ ಹಿಂದೆ ವಿದ್ಯುತ್ ಸಂಪರ್ಕ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು.

ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನ: ನಸುಕಿನ ವೇಳೆ ಕೃತ್ಯ?

ತಮ್ಮದೇ ಸ್ವಂತ ಅಂಗಡಿ ( ಕಟ್ಟಡವನ್ನು) ಹೊಂದಿದ್ದ ಇವರು,ತಮ್ಮ ಆತ್ಮೀಯ ವಲಯದಲ್ಲಿ ರವಿ ಎಂದೇ ಪರಿಚಿತರಾಗಿದ್ದರು. ಸೆ 18 ರ ಬುಧವಾರ ಇವರ ಆರೋಗ್ಯದಲ್ಲಿ ಆಕಸ್ಮಿಕ ಏರುಪೇರಾಗಿ,ತಾಲೂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೆಲ ಹೊತ್ತಿನಲ್ಲಿಯೇ  ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಅವರ ಮೃತ ದೇಹವನ್ನು ಲಕ್ಷ್ಮೇಶ್ವರದ ಸ್ಪ ಗೃಹದಲ್ಲಿ ಇಡಲಾಗಿದೆ. ಬೆಂಗಳೂರಿನಲ್ಲಿರುವ ಮಗ ಮತ್ತು ಮಗಳು ಅಂಕೋಲಾಕ್ಕೆ ಬಂದ ನಂತರ, ಮೃತರ ಅಂತ್ಯಕ್ರಿಯೆಯನ್ನು ಸೆ 19ರ ಗುರವಾರ ಬೆಳಿಗ್ಗೆ ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ನೆರವೇರಿಸಲಾಗುವುದೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ ಮೃತ ರವೀಂದ್ರ ನಾಯ್ಕ, ಪತ್ನಿ, ಮಗ, ಮಗಳು,ಸಹೋದರ- ಸಹೋದರಿಯರು ಸೇರಿದಂತೆ  ಅಪಾರ ಬಂಧು ಬಳಗ ತೊರೆದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button