Follow Us On

Google News
Important
Trending

ಫೆಬ್ರವರಿ 3 ರಂದು ಶಕ್ತಿದೇವತೆ ಅಂತ್ರವಳ್ಳಿಯ ಶ್ರೀ ದುರ್ಗಾಂಬಾ ದೇವಿಯ ವರ್ಧಂತಿ ಉತ್ಸವ ಮತ್ತು ನವಗ್ರಹ ಪೂರ್ವಕ ದುರ್ಗಾಹವನ

ಕುಮಟಾ: ಶ್ರೀ ವಿಶ್ವೇಶ್ವರ ದೇವ ಟ್ರಸ್ಟ್ ಅಂತ್ರವಳ್ಳಿ ವತಿಯಿಂದ ಫೆಬ್ರವರಿ 3ರ ಶುಕ್ರವಾರ ಶ್ರೀ ದುರ್ಗಾಂಬಾ ದೇವಿಯ ವರ್ಧಂತಿ ಉತ್ಸವ ಮತ್ತು ನವಗ್ರಹ ಪೂರ್ವಕ ದುರ್ಗಾಹವನ ಹಾಗು ಚಂಡಿ ಸಪ್ತಶತೀ ಪಾರಾಯಣ, ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಈ ದೇವತಾ ಕಾರ್ಯಕ್ರಮಕ್ಕೆ ತನು ಮನ, ಧನ ಸಹಾಯ ನೀಡಿ, ಪ್ರಸಾದ ಸ್ವೀಕರಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಸ್ತ ಊರನಾಗರಿಕರು ಕೋರಿದ್ದಾರೆ. ಅಲ್ಲದೆ, ಶ್ರೀ ದುರ್ಗಾಂಬಾ ದೇವಾಲಯದ ಆವಾರ ಅಂತ್ರವಳ್ಳಿಯಲ್ಲಿ ರಾತ್ರಿ 10 ಗಂಟೆಗೆ, ಯಕ್ಷಗಾನ ಬಯಲಾಟ ಲವ-ಕುಶ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.

ವಿಸ್ಮಯ ನ್ಯೂಸ್, ಕುಮಟಾ

Back to top button