RWF Recruitment 2023: ರೈಲ್ವೆ ನೇಮಕಾತಿ: 192 ಹುದ್ದೆಗಳಿಗೆ ಅಧಿಸೂಚನೆ: SSLC ಆದವರು ಅರ್ಜಿ ಸಲ್ಲಿಸಬಹುದು

ಬೆಂಗಳೂರು ರೈಲ್ ವೀಲ್ ಫ್ಯಾಕ್ಟರಿಯಲ್ಲಿ 192 ಹುದ್ದೆಗಳು ಖಾಲಿಯಿದ್ದು, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೌದು, ಅಗತ್ಯವಿರುವ 192 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಬೆಂಗಳೂರು ರೈಲ್ವೆ ವೀಲ್ ಫ್ಯಾಕ್ಟರಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಮಾಸಿಕ ವೇತನ ರೂ.10,899/- ರೂ.12,261/- ವರೆಗೆ ಅಭ್ಯರ್ಥಿಗಳಿಗೆ ಕೊಡಲಾಗುವುದು ಎಂದು ತಿಳಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನವಾಗಿದೆ.

ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 24 ವರ್ಷವಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಎಸ್ಸಿ/ಎಸ್ಟಿ ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 100 ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇಲಾಖೆ ಹೆಸರುಬೆಂಗಳೂರು ರೈಲ್ ವೀಲ್ ಫ್ಯಾಕ್ಟರಿ
ಒಟ್ಟು ಹುದ್ದೆಗಳು 192
ಅರ್ಜಿ ಸಲ್ಲಿಕೆ ಪ್ರಾರಂಭ21-01-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ20-02-2023
ಅರ್ಜಿ ಸಲ್ಲಿಸುವ ಬಗೆOffline

ಅರ್ಜಿ ಸಲ್ಲಿವುದು ಹೀಗೆ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಸೀನಿಯರ್ ಪರ್ಸನಲ್ ಆಫೀಸರ್, ಪರ್ಸನಲ್ ಡಿಪಾರ್ಟ್ಮೆಂಟ್, ರೈಲ್​ ವ್ಹೀಲ್​ ಫ್ಯಾಕ್ಟರಿ, ಯಲಹಂಕ ಬೆಂಗಳೂರು- 560064.. ಉದ್ಯೋಗಾವಕಾಶದ ಕುರಿತು ಇನ್ನಷ್ಟು ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version