Follow Us On

WhatsApp Group
Focus NewsImportant
Trending

ಬೆಂಕಿ ಅನಾಹುತ|ಸುಟ್ಟು ಕರಕಲಾದ ಅಣ್ಣತಮ್ಮಂದಿರ ಮನೆಗಳು

ಹೊಸ ಮನೆ ಕಟ್ಟಲು ಕೂಡಿಟ್ಟ ಲಕ್ಷಾಂತರ ರೂಪಾಯಿ ನಗದು ಸೇರಿ ಅಪಾರ ಹಾನಿ

ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗರಣಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಎರಡು ಮನೆಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಅಂದಾಜಿಸ ಲಾಗಿದೆ.

ಅಕ್ರಮವಾಗಿ 2.60 ಕೋಟಿ ವೆಚ್ಚದ ವಜ್ರವನ್ನು ದುಬೈಗೆ ಸಾಗಿಸುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳ ಮೂಲದ ಇಬ್ಬರು ವಶಕ್ಕೆ

ಹೆಗ್ಗರಣಿಯ ಮಾದೇವ ನಾಗಪ್ಪ ಗೌಡ ಮತ್ತು ವೆಂಕಟ್ರಮಣ ನಾಗಪ್ಪ ಗೌಡ ಸಹೋದರರ ಕುಟುಂಬಗಳು ವಾಸಿಸುತ್ತಿದ್ದ ( 61 A ಮತ್ತು 61 B ನಂಬರಿನ ) ಮನೆಗಳು ಬೆಂಕಿಗೆ ಆಹುತಿಯಾಗಿದ್ದು ,ಹೊಸ ಮನೆ ಕಟ್ಟಲು ಕೂಡಿಟ್ಚಲಕ್ಷಾಂತರ ರೂ ನಗದು ಹಣ, ಮನೆಯಲ್ಲಿಟ್ಟಿದ್ದ,ಬಂಗಾರದ ಆಭರಣಗಳು, ಪಾತ್ರೆ ಪಗಡೆಗಳು,ದಿನ ಬಳಕೆ ವಸ್ತುಗಳು ,ಆಹಾರ ಸಾಮಗ್ರಿ, ಕೊಯ್ಲು ಮಾಡಿಟ್ಟ ಅಡಿಕೆ,ಭತ್ತ, ಸೇರಿದಂತೆ ಇತರೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಗಿವೆ.

ಬೆಂಕಿಯ ಕೆನ್ನಾಲಿಗೆ ಎಲ್ಲಡೆ ಹರಡಿ,ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿ ಹತೋಟಿಗೆ ತರಲು ಸಾಧ್ಯವಾಗದೇ ಮನೆ ಹಾಗೂ ಮನೆಯಲ್ಲಿದ್ದ ಎಲ್ಲ ಸಾಮಾನುಗಳು ಸುಟ್ಟು ಕರಕಲಾಗಿದ್ದು, ಒಟ್ಟಾರೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎನ್ನಲಾಗಿದೆ.

ಬೆಂಕಿ ಅವಘಡದಲ್ಲಿ ಮಾದೇವ ಗೌಡ ಅವರ ಕುಟುಂಬದ ಸದಸ್ಯರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು ಎರಡೂ ಕುಟುಂಬಗಳ ಎಂಟು ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರಾದ ರವಿ ಪಟು ನಾಯ್ಕ, ಸಂಜು ಮನೋಹರ ನಾಯ್ಕ, ವೆಂಕಟ್ರಮಣ ಹುಲಿಯ ಗೌಡ ಬೆಂಕಿ ಆರಿಸಲು ಸಾಕಷ್ಟು ಶ್ರಮ ಪಟ್ಟರು.
ಕಂದಾಯ ಇಲಾಖೆ ,ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಂಕಿ ಅವಘಡಕ್ಕೆ ಕಾರಣ ಹಾಗೂ ಹಾನಿಯ ನಿಖರ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button