ಮನೆಯಿಂದ ಹೊರಗೆ ಹೋದ ಗೃಹಿಣಿ ನಾಪತ್ತೆ : ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ: ದೂರು ದಾಖಲು

ಅಂಕೋಲಾ : ಮನೆಯಿಂದ ಹೊರಗೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಎಲ್ಲಿಯೋ ಕಾಣೆಯಾದ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ. ಉಮಾ ರತೀಶ ನಾಯಕ (48) ಈಕೆಯೇ‌ ಕಾಣೆಯಾಗಿರುವ ಗೃಹಿಣಿ. ಈ ಕುರಿತು ಮಹಿಳೆಯ ಪತಿ ರತೀಶ ವೆಂಕಟರಮಣ ನಾಯಕ ದೂರು ನೀಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಆಗಾಗ ಮನೆ ಬಿಟ್ಟು ಹೋಗುತ್ತೇನೆಂದು ಹೊರ ಹೋದವಳು ಸಂಜೆ ಮತ್ತೆ ಮನೆಗೆ ವಾಪಸಾಗುತ್ತಿದ್ದಳು ಎನ್ನಲಾಗಿದೆ.

ಹಸೆಮಣೆ ಏರಿ ಮೂರು ತಿಂಗಳಾಗುವುದರೊಳಗೆ ಮಸಣಸೇರುವಂಥಾದ ನವ ವಿವಾಹಿತ: ಪ್ರತಿಷ್ಠಿತ ಜವಳಿ ವ್ಯಾಪಾರಸ್ಥ ಕುಟುಂಬದ ಕಿರಿಯ ಕುಡಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದನೇ?

ಫೆ.16 ರಂದು ಬೆಳಿಗ್ಗೆ ಮನೆಯಿಂದ ಹೊರಟವಳು ಇದುವರೆಗೂ ಬಾರದೆ ಎಲ್ಲಿಯೋ ಕಾಣೆಯಾಗಿರುತ್ತಾಳೆ.  ಕಾಣೆಯಾಗಿರುವ ಉಮಾ 5.4″ ಎತ್ತರದ ನಸುಗಪ್ಪು ಮೈಬಣ್ಣ ಹೊಂದಿದ್ದು ಮನೆಯಿಂದ ಹೊರಟಾಗ ಕೇಸರಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ ತೊಟ್ಟಿದ್ದು ಬೆನ್ನಿನ ಮೇಲೆ ಗಾಯದ ಕಲೆಯೊಂದಿದೆ. ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-220333, ಮೊ.ನಂ.9480805250, 9480705268 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ರೆ ಕಾರ್ಯ ಮುಂದುವರೆದಿದೆ.

ಫೆ 18 ರಂದೂ ಅಂಕೋಲಾ ಬಸ್ ನಿಲ್ದಾಣದ ಹತ್ತಿರ  ತನ್ನ ಪರಿಚಿತರನ್ನು ಮಾತನಾಡಿಸಿದ್ದಳು ಎನ್ನಲಾಗಿದ್ದು,ಆದರೆ ಆ ಮಹಿಳೆಯೇ ಕಾಣೆಯಾಗಿದ್ದಾಳೆ ಎಂದು ದೂರ ದಾಖಲಾಗಿರುವುದು ಅರಿವಿರದ ಅವರು ಸಹಜ ಮಾತುಕತೆ ನಡೆಸಿ  ಬಂದಿದ್ದರು. ಬಹು ಹೊತ್ತಿನ ಬಳಿಕ ಗೆಳೆಯರ ವಾಟ್ಸಪ್ ಗ್ರುಪನಲ್ಲಿ ಅದೇ ಮಹಿಳೆ ಭಾವಚಿತ್ರದ ಕಂಡು ,ಅವಳು ಕಾಣೆಯಾಗಿರುವ ಕುರಿತು ಬಂದ ಸಂದೇಶ ಗಮನಿಸಿ,ಮೊದಲೇ ಗೊತ್ತಾಗಿದ್ದರೆ ನಾನು ಮಹಿಳೆಯ ಕುಟುಂಬಸ್ಥರಿಗೆ ಇಲ್ಲವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿದ್ದೆ ಎಂದು ಪಶ್ಚಾತಾಪ ಪಟ್ಟಿದ್ದರು.ಈ ಘಟನೆಯನ್ನು ಗಮನಿಸಿದರೆ ಮಹಿಳೆ ಅಂಕೋಲಾ ಅಕ್ಕಪಕ್ಕದ ಸ್ಥಳಗಳಲ್ಲಿಯೇ ಇರುವ ಸಾಧ್ಯತೆಗಳ ಬಗ್ಗೆಯೂ ಕೇಳಿ ಬಂದಂತಿದ್ದು,ಅವಳಿಗಾಗಿ ಹುಡುಕಾಟ ಮುಂದುವರೆದಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version