Focus NewsImportant
Trending

ಜಿಲ್ಲಾ  ಪ್ರವಾಸದಲ್ಲಿರುವ ಐ ಜಿ ಪಿ ಡಾ. ಗುಪ್ತ : ಅಂಕೋಲಾ ಠಾಣೆಗೂ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ

ಅಂಕೋಲಾ:  ಪಶ್ಚಿಮ ವಲಯ (ಮಂಗಳೂರು ) ಐಜಿಪಿ ಡಾ. ಚಂದ್ರಗುಪ್ತ ಅವರು ಮಂಗಳವಾರ ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಜಿಲ್ಲಾ ಪ್ರವಾಸದಲ್ಲಿರುವ ಅವರು ಸಿರ್ಸಿ ದಾಂಡೇಲಿ, ಕಾರವಾರ ಭೇಟಿಯ ಬಳಿಕ ಅಂಕೋಲಾಕ್ಕೆ ಆಗಮಿಸಿ,ಸ್ಥಳೀಯ ಅಧಿಕಾರಿಗಳಿಂದ ಠಾಣೆಯ ಕುರಿತು ಮಾಹಿತಿ ಪಡೆದುಕೊಂಡರು.ಬರಲಿರುವ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತಷ್ಟು ಬಿಗು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

IDBI Bank Recruitment: ಬ್ಯಾಂಕ್ ನಲ್ಲಿ ಉದ್ಯೊಗಾವಕಾಶ: 48 ಸಾವಿರದಿಂದ 89 ಸಾವಿರ ವೇತನ ಶ್ರೇಣಿ

ಠಾಣೆಯ ಹೊರ ಆವರಣದ ಗೋಡೆ ಮೇಲೆ ಬಿಡಿಸಲಾದ ಪದ್ಮಶ್ರೀ ಸುಕ್ರಿ ಗೌಡ ಹಾಗೂ ಸ್ವಾತಂತ್ರ್ಯ ಯೋಧರ ಭಾವ ಚಿತ್ರ,ಸ್ಥಳೀಯ ಜಾನಪದ ಕಲೆ ( ಸುಗ್ಗಿ, ಯಕ್ಷಗಾನ),ಧಾರ್ಮಿಕ ಆಚರಣೆ (ಬಂಡಿ ಹಬ್ಬ, ತೇರು ಉತ್ಸವ, ಪ್ರಸಿದ್ಧ ದೇವಾಲಯಗಳ ಚಿತ್ರ), ಜನ ಜೀವನ (ಮೀನುಗಾರಿಕೆ )ಮತ್ತಿತರ ಚಿತ್ರ ಹಾಗೂ ಬರಹಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉ. ಕ .ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಡಿವೈಎಸ್ಪಿ ವೆಲೆಂಟೆನ್ ಡಿಸೋಜಾ ಹಾಜರಿದ್ದರು.  ಅಂಕೋಲಾ ಸಿಪಿಐ ರಾಬರ್ಟ ಡಿಸೋಜಾ, ಪಿಎಸ್ಐ ಗಳಾದ ಕುಮಾರ ಕಾಂಬಳೆ, ಮಹಾಂತೇಶ ವಾಲ್ಮೀಕಿ, ಪ್ರೇಮನಗೌಡ ಪಾಟೀಲ್  ಹಾಗೂ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳನ್ನು ಸ್ವಾಗತಿಸಿ ಗೌರವಿಸಿದರು. ನಂತರ ಪೊಲೀಸ್ ಮಹಾ ನಿರೀಕ್ಷಕರು ಹೊನ್ನಾವರಕ್ಕೆ ಪ್ರಯಾಣ ಮುಂದುವರೆಸಿದರು.           

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Back to top button