ಜೊಯಿಡಾ: ಜೊಯಿಡಾದ ಕ್ರಿಯಾಶೀಲ ಹೋರಾಟಗಾರ ರವಿ ರೇಡಕರ ಇವರು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು, ಇವರನ್ನು ರಾಜ್ಯ ಕಿಸಾನ ಕಾಂಗ್ರೆಸ ಅಧ್ಯಕ್ಷ ಸಚಿನ ಮೀಗಾರವರು ಕರ್ನಾಟಕ ಪ್ರದೇಶ ಕಿಸಾನ ಕಾಂಗ್ರೆಸನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಹಳಿಯಾಳ ಜೊಯಡಾ ಶಾಸಕ ಆರ್.ವ್ಹಿ. ದೇಶಪಾಂಡೆಯವರ ನೇತೃತ್ವದಲ್ಲಿ ಅಧಿಕೃತವಾಗಿ ನೇಮಕ ಪತ್ರ ನೀಡಲಾಯಿತು. ಶಾಸಕ ದೇಶಪಾಂಡೆ ಯವರು ಶಾಲು ಹಾಕಿ ಮತ್ತು ನೇಮಕ ಪತ್ರ ನೀಡಿ ರವಿ ರೇಡಕರ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಜೊಯಡಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿನಯ ದೇಸಾಯಿ ಮತ್ತು ಕಾರ್ಯಕರ್ತರು ಹಾಜರ ಇದ್ದರು. ರವಿ ರೇಡಕರ ಕಳೆದ ಮೂರು ದಶಕಗಳಿಂದ ಅನೇಕ ಸಾಮಾಜಿಕ ಸಂಘಟನೆಗಳು ಹಾಗು ಅನೇಕ ಹೋರಾಟಗಳ ಮುಖಾಂತರ ಜಿಲ್ಲೆಯಲ್ಲಿ ಜನಮನ್ನಣೆ ಗಳಿಸಿದ್ದರು. ‘ಕಾಳಿ ಬ್ರಿಗೇಡ್’ ಸಂಘಟನೆ ರಾಜ್ಯದಲ್ಲೆ ಉತ್ತಮ ಹೆಸರು ಪಡೆದಿತ್ತು. ಇವತ್ತು ಕಿಸಾನ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗುವ ಮೂಲಕ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದರು.
ಕಿಸಾನ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ: ಇವತ್ತು ಕಿಸಾನ ಕಾಂಗ್ರೆಸ್ ರಾಜ್ಯದ ಜವಾಬ್ದಾರಿ ವಹಿಸಿಕೊಳ್ಳಲು ಹಾಗು ರಾಜ್ಯದ ಪ್ರಭಾವಿ ನಾಯಕ ದೇಶಪಾಂಡೆ ಯವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಮಾಡುವುದು ತುಂಬಾ ಸಂತಸ ತಂದಿದೆ. ಅವಕಾಶ ನೀಡಿದ ರಾಜ್ಯದ ಪ್ರಭಾರಿ, ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪಸಿಂಗ ಸುರ್ಜೆವಾಲಾ, ಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ , ಶಾಸಕರಾದ ಆರ. ವ್ಹಿ. ದೇಶಪಾಂಡೆ ಕಿಸಾನ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸಚಿನ ಮೀಗಾ, ಭಿಮಣ್ಣ ನಾಯ್ಕ, ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಹಿಂ.ವ. ( ಎಲ್.ಡಿ.ಎಮ್) ಸೆಲ್ ನ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೆಕರ, ಜೊಯಡಾ ಬ್ಲಾಕ್ ಅಧ್ಯಕ್ಷ ವಿನಯ ದೇಸಾಯಿ ಮತ್ತು ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಗೂ ನಾನು ಚಿರಋಣಿ ಯಾಗಿದ್ದೆನೆ. ಪಕ್ಷವನ್ನು ಗೆಲ್ಲಿಸಲಿಕ್ಕೆ ಹಾಗು ಕಿಸಾನ ಸಂಘಟನೆಗಾಗಿ ಸರ್ವತೋಮುಖವಾಗಿ ಶ್ರಮ ಹಾಕುತ್ತೇನೆ ಎಂದು
ರವಿ ರೇಡಕರ್ ಹೇಳಿದರು.
ಕಾಳಿ ಬ್ರಿಗೇಡ್ ತುರ್ತು ಸಭೆಯಲ್ಲಿ ಕಾಳಿ ಬ್ರೀಗೇಡ್ ಸಂಚಾಲಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಕಾಂಗ್ರೆಸ್ ಪಕ್ಷದ ಕಿಸಾನ ಸೆಲ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ನೇಮಕ ಗೊಂಡಿದ್ದರಿಂದ ಕಾಳಿ ಬ್ರಿಗೇಡ್ ನಿಯಮಾವಳಿ ಪ್ರಕಾರ ರಾಜಿನಾಮೆ ನೀಡಿದರು. ಹೊಸ ಮುಖ್ಯ ಸಂಚಾಲಕರಾಗಿ ವಕೀಲರಾದ ಸುನೀಲ ದೇಸಾಯಿ ಯವರನ್ನು ಆಯ್ಕೆ ಮಾಡಲಾಯಿತು.
ವಿಸ್ಮಯ ನ್ಯೂಸ್ ಜೋಯ್ಡಾ