ಹಳಿಯಾಳ: ಪತ್ನಿಯನ್ನು ಕೊಲೆ ಮಾಡಿ ನೀರಿನ ಬ್ಯಾರಲ್ ನಲ್ಲಿ ಬಚ್ಚಿಟ್ಟಿದ್ದ ಗಂಡನನ್ನ ಹಳಿಯಾಳ ಹಾಗೂ ರಾಮನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ ತನ್ನ ಹೆಂಡತಿ ಶಾಂತಕುಮಾರಿ ಮಡಿವಾಳ (38) ಅವರನ್ನು ಕೊಲೆ ಮಾಡಿದ್ದಾನೆ. ಬೇರೆ ಹೆಣ್ಣು ಮಕ್ಕಳೊಂದಿಗೆ ಮಾತನಾಡುತ್ತಾನೆಂದು ಶಾಂತಕುಮಾರಿ, ತುಕಾರಾಮನ ಮೇಲೆ ಸಂಶಯ ವ್ಯಕ್ತಪಡಿಸಿದ್ದಳು. ಇದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಕೊನೆಗೆ ಅದು ಪತ್ನಿಯ ಕೊಲೆಯಲ್ಲಿ ಅಂತ್ಯಗೊoಡಿದೆ.
40 ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
ಕೊಲೆಯನ್ನ ಮುಚ್ಚಿ ಹಾಕುವ ಉದ್ದೇಶದಿಂದ ಪತ್ನಿಯ ಮೃತದೇಹವನ್ನು ತುಕಾರಾಮ್ ಬ್ಯಾರಲ್ ನಲ್ಲಿ ಬಚ್ಚಿಟ್ಟಿದ್ದ. ಪಕ್ಕದವರು ಹಾಗೂ ಖಾನಾಪುರ ಮೂಲದ ರಿಜ್ವಾನ್ ಕುಂಬಾರಿ ಎಂಬುವವರ ವಾಹನವನ್ನು ಬಾಡಿಗೆ ಪಡೆದು ಚಾಲಕ ರಿಜ್ವಾನ್ ಮತ್ತು ಅಳ್ನಾವರ ಮೂಲದ ಸಮೀರ್ ಪಂತೋಜಿ ಹಾಗೂ ತುಕಾರಾಮ ಸೇರಿ ರಾಮನಗರದ ಕಾಡಿನಲ್ಲಿ ಮೃತದೇಹವನ್ನು ಎಸೆಯಲು ಮುಂದಾದಾಗ ಹಳಿಯಾಳ ಮತ್ತು ರಾಮನಗರದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೆಂಡತಿಯನ್ನು ಕೊಂದ ಗಂಡನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ