35 ಅಡಿ ಆಳದ ಬಾವಿಗೆ ಬಿದ್ದ ಯುವತಿ: ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ

ಸಿದ್ದಾಪುರ: ಆಕಸ್ಮಿಕ ಕಾಲು ಜಾರಿ ಯುವತಿಯೊರ್ವಳು ಬಾವಿಗೆ ಬಿದ್ದು ಅಗ್ನಿಶಾಮಕದವರು ಯುವತಿ ಪ್ರಾಣ ರಕ್ಷಿಸಿದ ಘಟನೆ ತಾಲೂಕಿನ ಐಗೋಡ್ ನಲ್ಲಿ ನಡೆದಿದೆ. ಕಾನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಗೋಡ್ ನಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದ ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಕಾರದೊಂದಿಗೆ ಯುವತಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಪ್ರಾಣ ರಕ್ಷಿಸಿದ್ದಾರೆ. ಸುಮಾರು 35 ಕ್ಕೂ ಅಡಿ ಆಳದ ಕೆಲಸ ಪ್ರಗತಿಯಲ್ಲಿದ್ದ ಬಾವಿಗೆ ಬಿದ್ದ ಯುವತಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಅಗ್ನಿಶಾಮಕದಳದವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version