ಭಟ್ಕಳ : ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಜನರು ಸಂಭ್ರಮ ಸಡಗರದಿಂದ ಆಚರಿಸಿದರು. ತಾಲೂಕಿನ ಬಂದರಿನಲ್ಲಿರುವ ಖಾರ್ವಿ ಸಮುದಾಯದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟವಾಗಿದ್ದು,,ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಪಾಗಿ ಸೇರುವುದೂ ಒಂದು ವಿಶೇಷ. ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಐದು ದಿನಗಳ ಕಾಲ ಆಚರಿಸಿದರು.
SSC Recruitment 2023: ಬೃಹತ್ ನೇಮಕಾತಿ: 5,369 ಹುದ್ದೆಗೆ ಅರ್ಜಿ ಆಹ್ವಾನ: SSLC, PUC ಆದವರು ಅರ್ಜಿ ಸಲ್ಲಿಸಬಹುದು
ಪ್ರತಿ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬ ಹೋಳಿ ಹಬ್ಬದ ಹರಕೆ ಹೊತ್ತು ನಿಯಮ ಪಾಲಿಸುತ್ತದೆ. ಹರಕೆದಾರರ ಮನೆಯಿಂದ ಒಂದು ಅಡಕೆ ಮರವನ್ನು ಹುಣ್ಣಿಮೆ ದಿನ ಸಮಾಜದವರೆಲ್ಲರೂ ಸೇರಿ ವಾದ್ಯ ಕುಣಿತ ಮೆರವಣಿಗೆಯ ಮೂಲಕ ಕಡಲತೀರಕ್ಕೆ ತರುತ್ತಾರೆ. ಜೈಕಾರ, ಘೊಷಣೆ ಜತೆಗೆ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಮೆರವಣಿಗೆ ಮೂಲಕ ಕಡಲತೀರಕ್ಕೆ ತಂದು ನೆಟ್ಟ ಅಡಕೆ ಮರವನ್ನು ದಹನ ಮಾಡುವ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆದಿದೆ. ಮೊದಲೇ ತಯಾರಿ ಮಾಡಿಕೊಂಡಿದ್ದ ಹುಲ್ಲಿನಿಂದ ಮಾಡಿದ ಕಾಮನ ರೂಪಿಗೆ ಬೆಂಕಿಯನ್ನು ಹಚ್ಚಿ ಕಾಮದಹನ ಮಾಡುವ ಮೂಲಕ ಸಂಭ್ರಮಿಸಿದರು. ಗ್ರಾಮೀಣ ಠಾಣೆ ಪೋಲಿಸರು, ಹಾಗೂ ಕರಾವಳಿ ಪೋಲಿಸರು ಠಾಣೆ ಪೋಲಿಸರು ಯಾವುದೇ ಅಹಿತಕರ ಘಟನೆಗಳು ನಡೆದಂತೆ ಸೂಕ್ತ ಬಂದೋಬಸ್ತ್ ಮಾಡಿದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ