ಭಟ್ಕಳ: ವಾಹನವೊoದರಲ್ಲಿ ಅಕ್ರಮವಾಗಿ 700 ಕೆ.ಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಇಲ್ಲಿನ ಡೊಂಗರಪಳ್ಳಿ ಕ್ರಾಸ್ ಸಮೀಪ ಪೊಲೀಸರು ದಾಳಿ ನಡೆಸಿ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ, ಮುಜಫರ್ ಹುಸೇನ್ ಫಕ್ರು ಮುಸಾನಗರ ನಿವಾಸಿ ಎಂದು ತಿಳಿದು ಬಂದಿದೆ. ಈತ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರನ್ನು ವದೆ ಮಾಡಿ ಸುಮಾರು 1,40,000 ಮೌಲ್ಯದ 700ಕೆಜಿ ಆಗುವಷ್ಟು ಮಾಂಸವನ್ನು ಕಟಾವು ಮಾಡಿ ಯಾವುದೇ ಪರವಾನಿಗೆ ವಾಹನದಲ್ಲಿ ತುಂಬಿಕೊAಡು ಸಾಗಾಟ ಮಾಡುವ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ಡೊಂಗರಪಳ್ಳಿ ಕ್ರಾಸ್ ಸಮೀಪ ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ