Focus NewsImportant
Trending

ರೂಪಾಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅಭಿಮಾನ ತೋರ್ಪಡಿಸಿದ ಮುಸ್ಲಿಂ ಮಹಿಳೆಯರು: ಕೋಮು ಬತ್ತಿ ಹಚ್ಚಿ ತಪ್ಪು ಸಂದೇಶ ಸಾರಲು ಮುಂದಾದವರಾರು ?

ಅಂಕೋಲಾ: ಇತ್ತೀಚೆಗೆ ನಡೆದ ಪ್ರಮುಖ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಮುಸ್ಲಿಂ ಸಮುದಾಯದ ಹಲವು ಮಹಿಳೆಯರು ಶಾಸಕಿ ರೂಪಾಲಿ ನಾಯ್ಕ್ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಬಿಜೆಪಿ ಪಕ್ಷ ಹಾಗೂ ರೂಪಾಲಿ ನಾಯ್ಕ ಬಗ್ಗೆ ತಮ್ಮ ಅಭಿಮಾನ ಹಾಗೂ ಪ್ರೀತಿ ತೋರ್ಪಡಿಸಿದಂತಿತ್ತು.

ಶಾಸಕಿ ಸಹ ಎಂದಿನ ಆತ್ಮೀಯತೆಯಲ್ಲಿಯೇ ಅವರೆಲ್ಲರ ಮಧ್ಯೆ ನಗುನಗುತ್ತಲೇ ಪಾಲ್ಗೊಂಡಿದ್ದರು. ಆದರೆ  ಅದೇ ಭಾವಚಿತ್ರವನ್ನು ಬಳಸಿಕೊಂಡು, ಅದಾರೋ ಕಿಡಿಗೇಡಿಗಳು ರಾಜಕೀಯ ಷಡ್ಯಂತ್ರ ರೂಪಿಸಿದಂತಿದ್ದು, ಪೋಟೋ  ಕೆಳಗಡೆ ತಪ್ಪು ಅರ್ಥ ನೀಡುವ ರೀತಿಯ ಸಂದೇಶವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವೈರಲ್ ಆಗುವಂತೆ ಮಾಡಿದ್ದಾರೆ.

ಅದು ಸ್ವತಃ ಶಾಸಕಿಯ ಹೇಳಿಕೆ ಎಂಬಂತೆ ಪ್ರತಿಬಿಂಬಿಸಿ,ಕೋಮು ಒಲೈಕೆಯ ಬಣ್ಣ ಬಳಿದು ಶಾಸಕೀಯ ತೇಜೋವಧೆ ಮಾಡಲು ಹೊರಟಂತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಮಾಜದಲ್ಲಿ ಸಾಮರಸ್ಯ ಕದಡುವ -ಇಲ್ಲವೇ  ರಾಜಕೀಯ ದುರುದ್ದೇಶದಿಂದಲೇ ಇಂತಹ ಕುಕೃತ್ಯ ಎಸಗಿ ವಿಕೃತ ಸಂತೋಷ ಅನುಭವಿಸುವವರ ಪತ್ತೆಗೆ ಸಂಬಧಿಸಿದವರು ಕೂಡಲೇ ಮುಂದಾಗಬೇಕೆಂಬ ಮಾತು ಕೇಳಿ ಬಂದಿದೆ.

ಪಕ್ಷದಲ್ಲಿದ್ದುಕೊಂಡೇ ಶಾಸಕಿಯ ರಾಜಕೀಯ ಏಳಿಗೆ ಸಹಿಸಲಾಗದ ಕೆಲವರೂ ಸಹ ಇದೇ ತಮ್ಮ ಪಾಲಿಗೆ ಸುಸಮಯ ಎಂದು ತಿಳಿದು, ಅದಾರದೋ ಇಂತಹ ಕುಕೃತ್ಯಕ್ಕೆ ತಮ್ಮ  ಅಪರೋಕ್ಷ ಬೆಂಬಲ ನೀಡಿದಂತಿದ್ದು ತಾವು ಸಹ ಸತ್ಯಾಸತ್ಯತೆ ಅರಿಯುವ ಪ್ರಯತ್ನ ಮಾಡದೇ, ತಮ್ಮ ,ಜವಾಬ್ದಾರಿ ಹಾಗೂ ಪಕ್ಷ ನಿಷ್ಠೆ ಮರೆತು , ಅದೇ ಫೋಟೋ ಮತ್ತು ತಪ್ಪು ಸಂದೇಶವನ್ನು ಗಪ್ ಚುಪ್ ಆಗಿ ಅಲ್ಲಲ್ಲಿ ಹರಿಬಿಟ್ಟ ಟಾಪ್ ಲಿಸ್ಟ್ ನಲ್ಲಿ ಯೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ, ಸೈಬರ್ ಕ್ಟ್ರೆಂ ಅಪರಾಧ ಪ್ರಕರಣ ದಾಖಲಾಗಿ ಸೂಕ್ತ ತನಿಖೆ ಕೈಗೊಂಡರೆ ಇಂಥವರ ಮುಖವಾಡ ಕಳಚಿ ಬೀಳಲಿದೆ ಎನ್ನುತ್ತಾರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ರೂಪಾಲಿ ನಾಯ್ಕ ಅಭಿಮಾನಿಗಳು.ಮುಂದೆ ಈ ವಿಷಯ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button