ಗೋಕರ್ಣದ ತೀರ್ಥ ಯಾತ್ರೆಗೆ ಬಂದವ ಕೈಲಾಸ ಸೇರಿದ : ಬಸ್ ನಲ್ಲಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿಗೆ ತೀವ್ರ ಹೃದಯಾಘಾತ

ಮಹಾರಾಷ್ಟ್ರ ( ಪುಣೆ)ಯಿಂದ ತೀರ್ಥಯಾತ್ರೆಗೆಂದು  ಬಸ್ಸಿನಲ್ಲಿ ಬಂದಿದ್ದ ಸುಮಾರು 50 ಜನರಿದ್ದ ಪ್ರವಾಸಿಗರ ಗುಂಪಿನಲ್ಲಿದ್ದವರಲ್ಲಿ  ಓರ್ವ ಪ್ರಯಾಣಿಕನಿಗೆ ಬಸ್ಸಿನಲ್ಲಿರುವಾಗಲೇ ತೀವೃ ಹೃದಯಾಘಾತವಾಗಿ ಮೃತಪಟ್ಟ ಘಟನೆ ಅಂಕೋಲಾದಲ್ಲಿ ಸಂಭವಿಸಿದೆ. ನಿವೃತ್ತ ಪೊಲೀಸ್ ಸಿಬ್ಬಂದಿ ಎನ್ನಲಾದ ಲಾಲಾಸಾಬ ಬಿ ಧುಮಾಲ (65) ಮೃತ ಪಟ್ಟ ದುರ್ದೈವಿ.

ಗೋಕರ್ಣದ ತೀರ್ಥ ಯಾತ್ರೆಗೆ ಬಂದವ ಕೈಲಾಸ ಸೇರಿದ : ಬಸ್ ನಲ್ಲಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿಗೆ ತೀವ್ರ ಹೃದಯಾಘಾತ

ಈತ ತನ್ನ ಹೆಂಡತಿ ಹಾಗೂ ಪರಿಚಯಸ್ಥರೊಂದಿಗೆ ಪುರಿ ರಾಮೇಶ್ವರ ,ಗೋಕರ್ಣ ,ಪಂಡರಾಪುರ ಮತ್ತಿತರ ತೀರ್ಥ ಕ್ಷೇತ್ರಗಳ ಯಾತ್ರೆಯ ಉದ್ದೇಶದಿಂದ ಪ್ರವಾಸಕ್ಕೆ ಬಂದಿದ್ದು , ದಕ್ಷಿಣ ಕಾಶಿ ಗೋಕರ್ಣದಲ್ಲಿ ದೇವರ ದರ್ಶನ ಪಡೆದು ಮರಳುತ್ತಿದ್ದಾಗ ದಾರಿಮಧ್ಯೆ ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ.

ಈತನಿಗೆ ಅಸ್ತಮಾ ಮತ್ತಿತರ ಉಸಿರಾಟದ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ.ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಪುಣೆಗೆ  ಒಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಎ ಎ ಸೈ ಲಲಿತಾ ರಜಪೂತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version