ಹೊನ್ನಾವರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಧಿಕೃತ ಅಧ್ಯಯನ ಕೇಂದ್ರವು ಪ್ರಸಕ್ತ ಸಾಲಿನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ, ಬಡವರಿಗೆ, ಗೃಹಿಣಿಯರಿಗೆ ಹಾಗೂ ವಿದ್ಯಾಕಾಂಕ್ಷಿಗಳಿಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಾಂಶುಪಾಲರಾದ ಪ್ರೋ. ಎಚ್. ಆರ್. ಶಿಲ್ಪಾ ಅವರು ತಿಳಿಸಿದ್ದಾರೆ.
ಸಂಯೋಜನಾಧಿಕಾರಿಗಳಾಗಿ ಪ್ರೋ. ಖಾಳನಾಯಕ್ ಅವರನ್ನು ನೇಮಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಈ ಅಧ್ಯಯನ ಕೇಂದ್ರದಲ್ಲಿ ಬಿ.ಎ. ಬಿ.ಕಾಂ. ಬಿ.ಎಲ್.ಐ.ಎಸ್ಸಿ. ಬಿ.ಎಸ್ಸಿ. ಬಿ.ಬಿ.ಎ. ಬಿ.ಸಿ.ಎ. ಬಿ.ಎಡ್. ಎಂ.ಎ. ಎಂ.ಕಾಮ್. ಎಂ.ಎಸ್ಸಿ. ಎಂ.ಎಲ್.ಐ.ಎಸ್ಸಿ. ಎಂ.ಬಿ.ಎ ಎಂ.ಸಿ.ಎ. ಎಂ.ಎಡ್. ಪಿಜಿ ಡಿಪ್ಲೋಮಾ ಕೋರ್ಸುಗಳು ಪ್ರಸಕ್ತ 2022-2023 ನೇ ಸಾಲಿನಿಂದ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಪ್ರವೇಶಾತಿ ಪಡೆಯಲು ದಂಡ ಶುಲ್ಕ ಇಲ್ಲದೇ ಕೊನೆಯ ದಿನಾಂಕ ಮಾರ್ಚ್ 31 ಆಗಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ; 7899088861 ಹಾಗೂ 08387- 220090 ಸಂಪರ್ಕಿಸಲು ಸೂಚಿಸಲಾಗಿದೆ.
ವಿಸ್ಮಯ ನ್ಯೂಸ್, ಹೊನ್ನಾವರ