Follow Us On

Google News
Important
Trending

ಉತ್ತರಕನ್ನಡದಲ್ಲಿ ಇಂದು 21 ಕೇಸ್: 59 ಮಂದಿ ಗುಣಮುಖ

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ಏಳು ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹನೇಹಳ್ಳಿಯಲ್ಲಿ 4 ಪ್ರಕರಣ ಸೇರಿದಂತೆ ಮಾಸೂರ್ ಮುಂತಾದ ಭಾಗಗಳಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಹನೇಹಳ್ಳಿಯ 65 ವರ್ಷದ ಪುರುಷ, 62 ವರ್ಷದ ಮಹಿಳೆ, 26 ವರ್ಷದ ಯುವಕ, 85 ವರ್ಷದ ವೃದ್ಧೆ, ಮಾಸೂರಿನ 38 ವರ್ಷದ ಮಹಿಳೆ, ಕುಮಟಾದ 37 ವರ್ಷದ ಪುರುಷ, 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇಂದು ಏಳು ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,898 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಮೂವರಿಗೆ ಸೋಂಕು:

ಹೊನ್ನಾವರ: ತಾಲೂಕಿನಲ್ಲಿ ಇಂದು 3 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. ಇಂದು ವರದಿಯಾದ ಮೂರು ಪ್ರಕರಣಗಳು ಸಹ ಗ್ರಾಮೀಣ ಭಾಗದಲ್ಲಿಯೇ ಆಗಿದ್ದು ಮುಗ್ವಾ, ಅನಂತವಾಡಿ, ಚಿಪ್ಪಿಹಕ್ಕಲ ಭಾಗದಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅನಂತವಾಡಿಯ 50 ವರ್ಷದ ಪುರುಷ, ಮುಗ್ವಾದ 25 ವರ್ಷದ ಯುವಕ, ಚಿಪ್ಪಿಹಕಲದ 17 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ.

ಯಲ್ಲಾಪುರದಲ್ಲಿ ಒಂದು ಪಾಸಿಟಿವ್:

ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ಒಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಇಂದು ಬಾರೆಯಲ್ಲಿ ಓರ್ವರಿಗೆ ಇಂದು ಸೋಂಕು ತಗುಲಿದೆ.

ಶಿರಸಿಯ ಮೂವರಲ್ಲಿ ಕೊರೊನಾ

ಶಿರಸಿ: ತಾಲೂಕಿನಲ್ಲಿ ಮಂಗಳವಾರ ಮೂವರಿಗೆ ಕೊರೊನಾ ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ.
ಇಂದು ಯಲ್ಲಾಪುರ ರಸ್ತೆಯ ಎಸ್.ಬಿ.ಐ ಕಾಲೋನಿಯಲ್ಲಿ 1, ಉಂಚಳ್ಳಿಯಲ್ಲಿ 1, ಕಡವೆಯ ಓರ್ವರಲ್ಲಿ ಕೊರೊನಾ ದೃಢಪಟ್ಟಿದೆ. ಈವರೆಗೆ 1519 ಮಂದಿಯಲ್ಲಿಕೊರೊನಾ ಧೃಢವಾಗಿದ್ದು, 1464 ಮಂದಿ ಗುಣಮುಖಗೊಂಡಿದ್ದಾರೆ.

ಉತ್ತರಕನ್ನಡದಲ್ಲಿ 21 ಕರೊನಾ ಕೇಸ್:

ಜಿಲ್ಲೆಯಲ್ಲಿ ಇಂದು 21 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,297ಕ್ಕೆ ಏರಿಕೆಯಾಗಿದೆ. 59 ಸೋಂಕಿತರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ.

ಕಾರವಾರ, ಭಟ್ಕಳದಲ್ಲಿ ತಲಾ ಮೂರು ಕೇಸ್ ದಾಖಲಾಗಿದೆ.‌ಸಿದ್ದಾಪುರದಲ್ಲಿ ಇಂದು ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ವಿಸ್ಮಯ ನ್ಯೂಸ್ ಯೋಗೇಶ ಮಡಿವಾಳ ಕುಮಟಾ ಮತ್ತು ಶ್ರೀಧರ ನಾಯ್ಕ ಹೊನ್ನಾವರ.

Back to top button