Focus NewsImportant
Trending

ಮನೆಯ ಛಾವಣಿಯಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ: ಡ್ಯೂಟಿಗೆ ತಡವಾಗಿ ಬರುತ್ತೇನೆಂದವನು ಸಾವಿಗೆ ಶರಣಾದ

ಭಟ್ಕಳ:ತಾಲ್ಲೂಕಿನ ಯುವಕನೊರ್ವ ತನ್ನ ಮನೆಯ ಮೇಲೆ ಛಾವಣಿಯಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹನುಮಾನ್ ನಗರದಲ್ಲಿ ನಡೆದಿದೆ.ಮೃತ ಯುವಕ ಈಶ್ವರ ಮಂಜುನಾಥ ನಾಯ್ಕ 24 ವರ್ಷ ಎಂದು ತಿಳಿದು ಬಂದಿದೆ.

ಈತ ಹನುಮಂತನಗರದ ಬೇಕರಿಯೊಂದರಲ್ಲಿ ಉದ್ಯೋಗಿಯಾಗಿದ್ದನ. ಬೆಳಿಗ್ಗೆ 10 ಗಂಟೆಯ ಮೊದಲು ಅವರು ತಮ್ಮ ಸಹೋದ್ಯೋಗಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ ಇಂದು ಡ್ಯೂಟಿಗೆ ಸ್ವಲ್ಪ ತಡವಾಗಿ ಬರುವುದಾಗಿ ತಿಳಿಸಿದ್ದರು, ಆದರೆ ಸಹೋದ್ಯೋಗಿ ಮತ್ತೆ 10 ಗಂಟೆಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ,  ಬಳಿಕ ತನ್ನ ಮನೆಯಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲವಾಗಿದೆ.

ಮೃತ ಯುವಕನಿಗೆ ಇಬ್ಬರು ಸಹೋದರಿಯರಿದ್ದು, ಓರ್ವ ಸಹೋದರಿಗೆ ಮದುವೆಯಾಗಿದ್ದು ತಂದೆ-ತಾಯಿ ಹಾಗೂ ತಂಗಿಯೊಂದಿಗೆ ಮನೆಯಲ್ಲಿ ವಾಸವಿದ್ದನು. ಈ ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ಮೃತನ ಮಾವ ಮಾದೇವ ನಾಯ್ಕ ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಎ.ಎಸ್.ಐ ಗೋಪಾಲ್ ನಾಯಕ ತನಿಖೆ ಕೈಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Related Articles

Back to top button