Follow Us On

WhatsApp Group
Focus NewsImportant
Trending

ಸ್ಟೇರಿಂಗ್ ಕಟ್: 44 ಪ್ರಯಾಣಿಕರಿದ್ದ ಬಸ್ ಪಲ್ಟಿ

ಸಿದ್ದಾಪುರ : ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನಲ್ಲಿ ನಡೆದಿದೆ. ಹಳಿಯಾಳ ದಿಂದ ಶಿರಸಿ ಮೂಲಕ ಸಾಗರಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಸಿದ್ದಾಪುರ ತಾಲೂಕಿನ 16ನೇ ಮೈಲಕಲ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಗಿಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಸ್ ನ ಸ್ಟೇರಿಂಗ್ ಕಟ್ ಆಗಿ ಘಟನೆ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವಿಗೆ ಚಿಕಿತ್ಸೆಗಾಗಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button