Indian Post Office Recruitment 2023: SSLC ಪಾಸಾದವರಿಗೆ ಅವಕಾಶ: ಮಾಸಿಕ ಸಂಬಳ 60 ಸಾವಿರ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 19 ಸಾವಿರದಿಂದ 63 ಸಾವಿರದ ವರೆಗೆ ಸಂಬಳ ನೀಡಲಾಗುತ್ತದೆ. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿAದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು ಎಂದು ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳ ವಯಸ್ಸು ಮೇ.14, 2023 ಕ್ಕೆ ಕನಿಷ್ಠ 18 ವರ್ಷ ಹಾಗು 27 ವರ್ಷ ಮೀರಿರಬಾರದು.

ಹೌದು, ಒಟ್ಟು ನಾಲ್ಕು ಸ್ಟಾಫ್ ಕಾರ್​ ಡ್ರೈವರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 14ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಡ್ರೈವಿಂಗ್ ಟೆಸ್ಟ್, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತಿದ್ದು, ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಂಚೆ ಇಲಾಖೆ, ಆಡಳಿತ ವಿಭಾಗ, ನವದೆಹಲಿ – 110001 ಕ್ಕೆ ವಿಳಾಸಕ್ಕೆ ಕಳುಹಿಸಬೇಕು.

ಒಟ್ಟು ಹುದ್ದೆಗಳು04
ಇಲಾಖೆIndian Post Office
ಅಧಿಸೂಚನೆ ನೋಡಲುಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ14 – 05- 2023

ಉದ್ಯೋಗಾವಕಾಶದ ಕುರಿತು ಇನ್ನಷ್ಟು ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Exit mobile version