ಸಾರ್ವಜನಿಕ ರಸ್ತೆ ಚರಂಡಿ ಕೆಳಭಾಗದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ: ಅಪಾರ ಮದ್ಯ ವಶಕ್ಕೆ
ಇತ್ತೀಚಿಗಷ್ಟೇ ಗ್ರಾಮೀಣ ಪ್ರದೇಶ ಒಂದರ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ತಂಡ 604 ಲೀಟರ್ ನಷ್ಟು ಅಕ್ರಮ ಪೆನ್ನಿ ವಶಪಡಿಸಿಕೊಂಡ ಬೆನ್ನಿಗೇ, ಮತ್ತೊಂದು ಪ್ರತ್ಯೇಕ ಧಾಳಿ ನಡೆಸಿ ಅದೇ ಗ್ರಾಮದ ಸಾರ್ವಜನಿಕ ರಸ್ತೆ ಚರಂಡಿ ಕೆಳಭಾಗದಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ 345 ಲೀ ಗೋವಾ ಮದ್ಯ ಹಾಗೂ 80ಲೀ ಗೋವಾ ಫೆನ್ನಿ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Indian Post Office Recruitment 2023: SSLC ಪಾಸಾದವರಿಗೆ ಅವಕಾಶ: ಮಾಸಿಕ ಸಂಬಳ 60 ಸಾವಿರ
ತಾಲೂಕಿನ ಹಾರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಯೆಂದರ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಅಬಕಾರಿ ತಂಡ, 604 ಲೀಟರ್ ನಷ್ಟು ಭಾರಿ ಪ್ರಮಾಣದ ಅಕ್ರಮ ಪೆನ್ನಿ ವಶಪಡಿಸಿಕೊಂಡಿತ್ತು.ಅದಾದ ಬೆನ್ನಿಗೇ ಮತ್ತೆ ಕಾರ್ಯಾಚರಣೆ ಮುಂದುವರಿಸಿದ ತಂಡ ,ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಅಪಾರ ಪ್ರಮಾಣದ ಅಕ್ರಮ ಗೋವಾ ಮದ್ಯ ಮತ್ತು ಗೋವಾ ಪೆನ್ನಿ ವಶಪಡಿಸಿಕೊಂಡಿದೆ.ಆದರೆ ಈ ಬಾರಿ ಯಾವುದೇ ಖಾಸಗಿ ಸ್ಥಳದಲ್ಲಿ ಅಕ್ರಮ ದಾಸ್ತಾನು ಕಂಡು ಬರದೇ,ಸಾರ್ವಜನಿಕ ಸ್ಥಳದಲ್ಲಿ ಭಾರೀ ಪ್ರಮಾಣದ ಅಕ್ರಮ ಗೋವಾ ಮದ್ಯ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ.
ತಾಲೂಕಿನ ಹಾರವಾಡ ಸೀಬರ್ಡ್ ಕಾಲನಿ ಗ್ರಾಮ ಪಂಚಾಯತ್ ರಸ್ತೆಯ ಚರಂಡಿ ಕೆಳಭಾಗದಲ್ಲಿ ಸುಮಾರು 2.42 ಲಕ್ಷ ರೂಪಾಯಿ ಮೌಲ್ಯದ 345.6 ಲೀಟರ್ ಗೋವಾ ಸರಾಯಿ ಮತ್ತು 80 ಲೀಟರ್ ಗೋವಾ ಫೆನ್ನಿಯನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ಜಪ್ತು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸಂಗ್ರಹಿಸಿಟ್ಟ ಆರೋಪಿಯ ಕುರಿತು ವಿಚಾರಣೆ ನಡೆಸಲಾಗುತ್ತಿದೆ, ಈ ಗ್ರಾಮದ ಹೊರತಾಗಿ ನ ಇನ್ನೊಂದು ಪ್ರತ್ಯೇಕ ಅಬಕಾರಿ ಪ್ರಕರಣದಲ್ಲಿ ತಾಲೂಕಿನ ಬೆಳಂಬಾರ ಗ್ರಾಮದ ಮಧ್ಯ ಖಾರ್ವಿವಾಡಾದಲ್ಲಿ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಸುಮಾರು 16 ಸಾವಿರ ರೂಪಾಯಿ ಮೌಲ್ಯದ 31 ಲೀಟರ್ ಗೋವಾ ಫೆನ್ನಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಎನ್ನಲಾದ ಲತಾ ಎನ್ನುವವರು ಕಾನೂನಿನ ಕುಣಿಕೆಗೆ ಸಿಗದೇ ತಪ್ಪಿಸಿಕೊಂಡಿದ್ದು ಇಲಾಖೆ ಕಾನೂನು ಕ್ರಮ ಮುಂದುವರಿಸಿದೆ.
ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ಅವರ ನೇತೃತ್ವದಲ್ಲಿ ಹಾರ ವಾಡಾ ಹಾಗೂ ಬೆಳಂಬಾರ ಈ ಎರಡೂ ಭಾಗಗಳಲ್ಲಿ ಪ್ರತ್ಯೇಕ ದಾಳಿಗಳನ್ನು ನಡೆಸಲಾಗಿದ್ದು ಸಿಬ್ಬಂದಿಗಳಾದ ಈರಣ್ಣ ಕುರುಬೇಟ, ಶ್ರೀಶೈಲ ಹಡಪ, ಗಿರೀಶ್ ಅಟವಾಲೆ ವಾಹನ ಚಾಲಕ ವಿನಾಯಕ ನಾಯ್ಕ ಪಾಲ್ಗೊಂಡಿದ್ದರು.ಮುಂಬರುವ ಚುನಾವಣಾ ದೃಷ್ಟಿಯಿಂದ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ,ಅಕ್ರಮ ದಂಧೆಕೋರರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ