ಯುವತಿ ಮೇಲೆ ದೌರ್ಜನ್ಯ: ಭಟ್ಕಳದ ರಂಜನ್ ಮಾರ್ಕೆಟ್ ನಲ್ಲಿ ಪೊಲೀಸ್ ಜೀಪ್ ಮೇಲೆ ಕಲ್ಲುತೂರಾಟ: ಆರೋಪಿಗಳ ಬಂಧನ
ಭಟ್ಕಳ: ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್ ಅಡ್ಡಗಟ್ಟಿ ಕಲ್ಲಿನಿಂದ ಜಿಪ್ ಗ್ಲಾಸ್ ಒಡೆದಿರುವ ಘಟನೆ ತಡ ರಾತ್ರಿ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೀಪ್ ಮೇಲೆ ಹಲ್ಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ .
ಕೊನೆಗೂ ಬೋನಿಗೆ ಬಿದ್ದ ಕಪ್ಪು ಚಿರತೆ: ಗ್ರಾಮಸ್ಥರು ನಿರಾಳ
ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಷಯವಾಗಿ ಭಟ್ಕಳದ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪ ಅಪೋಲೋ ಪಾರ್ಮಸಿ ಎದುರಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ವೇಳೆ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ ಸಿಬ್ಬಂದಿ ಕೇಳಲು ಹೋದಾಗ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಾ ಏರು ಧ್ವನಿಯಲ್ಲಿ ರಂಪಾಟ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ.
ಈ ವೇಳೆ ಆರೋಪಿತರು ಪೊಲೀಸ್ ಜೀಪ್ನ್ನು ಅಡ್ಡಗಟ್ಟಿ ಜೀಪ್ ಮುಂದಕ್ಕೆ ಹೋಗದಂತೆ ಅಡೆತಡೆ ಉಂಟು ಮಾಡಿ ಪೊಲೀಸ್ ಜೀಪಿನ ಗ್ಲಾಸನ್ನು ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುoಟು ಮಾಡಿದ್ದಲ್ಲದೇ ಆರೋಪಿಗಳು ಪೊಲೀಸ ಸಿಬ್ಬಂದಿಯೊಬ್ಬರ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ ಜಿಪ್ ಮೇಲೆ ಹಲ್ಲೆ ನಡೆಸಿದ ಸಂಬoಧಿಸಿದoತೆ ಮತ್ತೆ ಮೂವರನ್ನು ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದು ಇನ್ನು ಕೆಲವರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಎಡಿಷನಲ್ ಎಸ್.ಪಿ. ಸಿಟಿ ಜಯಕುಮಾರ್ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಸ್ ಪ್ರತಿಕ್ರಿಯಿಸಿದ್ದು ಚುನಾವಣೆ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದರು. ಈ ಘಟನೆ ಇದೀಗ ರಾಜಕೀಯ ಆರೋಪ , ಪ್ರತ್ಯಾರೋಪಕ್ಕೂ ಕಾರಣವಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ