ವಾಹನದಲ್ಲಿ ಅನಧಿಕೃತವಾಗಿ ಮದ್ಯ ಸಾಗಾಟ: ಆರೋಪಿ ಬಂಧನ

ಸಿದ್ದಾಪುರ: ವಾಹನದಲ್ಲಿ ಅನಧಿಕೃತವಾಗಿ ಮದ್ಯ ಸಾಗಾಟ ಮಾಡುತ್ತಿರುವ ವೇಳೆ ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಬೇಡ್ಕಣಿ- ಇಟಗಿ ರಸ್ತೆಯಲ್ಲಿರುವ ವಾಟಗಾರ್ ಕ್ರಾಸ್ ಬಳಿ,  ಫೋರ್ಸ್‌ ತೂಫಾನ್ ಮ್ಯಾಕ್ಸಿ ಕ್ಯಾಬ್  ನಲ್ಲಿ ಏಳು ರಟ್ಟಿನ ಪೆಟ್ಟಿಗೆಗಳಲ್ಲಿ 90 ಎಮ್.ಎಲ್. ಅಳತೆಯ 672 ಓರಿಜನಲ್ ಚಾಯ್ಸ್ ವಿಸ್ಕಿಯ ಟೆಟ್ರಾಪ್ಯಾಕ್ ಗಳನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ, ಸ್ವತ್ತುಗಳನ್ನು ಜಪ್ತುಪಡಿಸಿ, ಆರೋಪಿ ಮಂಜುನಾಥ ಕನ್ನಾ ನಾಯ್ಕ  ಕಿರೆಕೋಡ  ಎಂಬಾತನನ್ನು ಬಂಧಿಸಿ  ಮೊಕದ್ದಮೆ ದಾಖಲಿಸಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಮೌಲ್ಯ ರೂ. 8 ಲಕ್ಷಗಳು ಆಗಿದ್ದು, ಮದ್ಯದ ಮೌಲ್ಯ ರೂ. 23602 ಆಗಿರುತ್ತದೆ. 

ಅಬಕಾರಿ ಜಂಟಿ – ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ಮತ್ತು ಅಬಕಾರಿ ಉಪಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಲ್ಲಿ,  ಮಾನ್ಯ ಅಬಕಾರಿ ಉಪ ಅಧಿಕ್ಷಕರು ಶಿರಸಿ ಉಪ- ವಿಭಾಗ ಇವರ ಮಾರ್ಗದರ್ಶನದಂತೆ ಮಹೇಂದ್ರ ಎಸ್. ನಾಯ್ಕ ಅಬಕಾರಿ ನಿರೀಕ್ಷಕರು ಮೊಕದ್ದಮೆಯನ್ನು ದಾಖಲಿಸಿದ್ದು,  ಸಿಬ್ಬಂದಿಗಳಾದ ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್ ಹಾಗೂ ಗಜಾನನ ಎಸ್. ನಾಯ್ಕ ಇವರುಗಳು ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ..

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version