ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ: ಮಧು ಬಂಗಾರಪ್ಪ

ಶಿರಸಿ:ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ ವಾಗಿದೆ.ಅಧಿಕಾರಕ್ಕೆ ಬಂದ ನಂತರ ಹಕ್ಕು ಪತ್ರ ವಿತರಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರುಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರು ಉನ್ನತ ಸ್ಥಾನದಲ್ಲಿದ್ದರೂ ಅರಣ್ಯ ಅತಿಕ್ರಮಣ ದಾರರ ಸಮಸ್ಯೆ ಗೆ ಸ್ಪಂದಿಸಿಲ್ಲ.ವಿಧಾನಸಭೆಯಲ್ಲಿ ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಸಹ ಮಾಡಲಿಲ್ಲ.ಬದಲಿಗೆ ಅವರಿಗೆ ಭೂಗಳ್ಳರು ಎಂಬ ಬಿರುದು ನೀಡಿ ಎಕ್ಕಲೆಬ್ಬಿಸಿ ಕೇಸ್ ಹಾಕುವ ಕೆಲಸ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಅರಣ್ಯ ಅತಿಕ್ರಮಣ ದಾರರಿಗೆ ಹಕ್ಕು ಪತ್ರ ವಿತರಣೆ ಮಾಡುತ್ತೇವೆ ಎಂದರು.

ಬಿಜೆಪಿಯ ಸುಳ್ಳಿನ ಹೇಳಿಕೆಗಳು , ಭಾವನಾತ್ಮಕ ಸಂದೇಶಗಳಿಂದ ಜನರು ಬೇಸತ್ತು ಹೋಗಿದ್ದಾರೆ.ಬದಲಾವಣೆ ಬಯಸುತ್ತಿದ್ದಾರೆ.ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ಸಾಧಿಸುವುದು ನಿಶ್ಚಿತ ವಾಗಿದೆ.

ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಹಾಕಿ ಜನಸಾಮಾನ್ಯರು ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ದೇಶದಲ್ಲಿ ನಿರ್ಮಾಣ ವಾಗಿದೆ.ಯಾವ ನೈತಿಕತೆ ಯಿಂದ ಅವರು ಜನರಲ್ಲಿ ಮತ ಕೇಳುತ್ತಾರೆ? ಸುಳ್ಳು ಹೇಳಿ ಜನರನ್ನು ಮರಳು ಮಾಡಿ ಇಷ್ಟು ದಿನ ಅಧಿಕಾರ ನಡೆಸಿದ ಬಿಜೆಪಿ ಈ ಭಾರಿ ಸೋಲು ಕಾಣಲಿದೆ.ಕಳೆದ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ನಡೆದ ಪರೇಶ್ ಮೇಸ್ತಾ ಸಾವಿನ ಪ್ರಕರಣ ವನ್ನೇ ಅಸ್ತ್ರ ವಾಗಿಟ್ಟುಕೊಂಡು ಜಯಗಳಿಸಿದ್ದರು.ಈ ಭಾರಿ ಅದೇ ಅವರಿಗೆ ತಿರುಗುಬಾಣ ವಾಗಲಿದೆ ಎಂದರು.

ಶಿರಸಿ ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಜಗದೀಶ್ ಗೌಡ, ಎಸ್ ಕೆ ಭಾಗ್ವತ್ ಸೇರಿ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶಿರಸಿ

Exit mobile version