ವಿದ್ಯುತ್ ಶಾರ್ಟ್ ನಿಂದ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಗಿನಸಸಿಯಲ್ಲಿ ವಿದ್ಯುತ್ ಶಾರ್ಟ್ ನಿಂದ ವಾಸ್ತವ್ಯದ ಮನೆಗೆ ತಾಗಿಕೊಂಡಿದ್ದ ಕೊಟ್ಟಿಗೆ ಒಳಗೊಂಡಿದ್ದ ಬಚ್ಚಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಸುಮಾರು 5 ಲಕ್ಷ ರೂ ವಸ್ತು ಗಳು ಭಸ್ಮ ವಾಗಿದೆ.

ಪರಮೇಶ್ವರ್ ಗಣಪತಿ ನಾಯ್ಕ್ ಕೆಳಗಿನಸಸಿ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಬೆಂಕಿಯಿಂದಾಗಿ ಪಕಾಶಿ ರಿಪು ಹಂಚು 30 ಚೀಲ ಸಿಪ್ಪೆ ಚಾಲಿ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಬೆಂಕಿ ತಾಗಿದ ತಕ್ಷಣವೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ, 112 ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌ ಸಿದ್ದಾಪುರ

Exit mobile version